alex Certify 17ನೇ ಶತಮಾನದ ಯುದ್ಧನೌಕೆಯನ್ನು ಪತ್ತೆ ಮಾಡಿದ ಪುರಾತತ್ವಶಾಸ್ತ್ರಜ್ಞರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17ನೇ ಶತಮಾನದ ಯುದ್ಧನೌಕೆಯನ್ನು ಪತ್ತೆ ಮಾಡಿದ ಪುರಾತತ್ವಶಾಸ್ತ್ರಜ್ಞರು

ಕಳೆದುಹೋದ 17 ನೇ ಶತಮಾನದ ಯುದ್ಧನೌಕೆ ಆಪ್ಲೆಟ್​ನ ಅವಶೇಷವನ್ನು ಸ್ವೀಡಿಷ್ ಕಡಲ ಪುರಾತತ್ವಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ವಸ್ತುಸಂಗ್ರಹಾಲಯದ ಪ್ರಕಾರ, ವಾಸಾ ಯುದ್ಧನೌಕೆಯ ಸಹೋದರಿ ಎಂದೇ ಕರೆಯಲ್ಪಡುತ್ತಿದ್ದ ಆಪ್ಲೆಟ್​ 225 ಅಡಿ ಉದ್ದವಿದ್ದು, ಇದು 1628ರಲ್ಲಿ ತನ್ನ ಚೊಚ್ಚಲ ಯಾನದ ಸಮಯದಲ್ಲಿಯೇ ಮುಳುಗಿ ಹೋಗಿತ್ತು. ವಾಸಾವನ್ನು ನಿರ್ಮಿಸಿದ ಹಡಗು ತಯಾರಕರೇ ವಾಸಾ ತಯಾರಿಸಿದ ಒಂದು ವರ್ಷದ ಬಳಿಕ ಅದೇ ಮಾದರಿಯ ಆಪ್ಲೆಟ್ ನಿರ್ಮಿಸಿದ್ದರು. ಆದ್ದರಿಂದ ಇವುಗಳನ್ನು ಸಹೋದರಿಯರು ಎಂದೇ ಕರೆಯಲಾಗುತ್ತಿತ್ತು.

ಇಷ್ಟು ವರ್ಷಗಳ ಬಳಿಕ ಅಪ್ಲೆಟ್​ನ ಅವಶೇಷ ಪತ್ತೆಯಾಗಿರುವುದಕ್ಕೆ ಪುರಾತತ್ತ್ವ ಶಾಸ್ತ್ರಜ್ಞರನ್ನು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಅವಶೇಷಗಳಿಂದಾಗಿ 17ನೇ ಶತಮಾನದ ಸ್ವೀಡಿಷ್ ಹಡಗು ತಯಾರಿಕೆಯ ಇತಿಹಾಸದ ಕುರಿತು ಇನ್ನಷ್ಟು ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದಿದ್ದಾರೆ.

“ವಾಸಾದ ತಯಾರಿಕೆಯ ಆರಂಭದಿಂದ, ಬಾಲ್ಟಿಕ್ ಸಮುದ್ರವನ್ನು ನಿಯಂತ್ರಿಸಬಲ್ಲ ಬೆಹೆಮೊತ್‌ ಎಂಬ ಯುದ್ಧನೌಕೆಯವರೆಗೆ ಇದರ ಇತಿಹಾಸ ಹೇಗೆ ವಿಕಸನಗೊಂಡಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯವಾದಂತಾಗಿದೆ” ಎಂದು ತಜ್ಞರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಹಡಗಿನ ಹೆಚ್ಚಿನ ಭಾಗವು ನಾಶವಾಗಿದ್ದರೂ, ನೆಲದ ಡೆಕ್‌ನವರೆಗೆ ಅದು ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ. ವಿಶೇಷವೆಂದರೆ 1961ರಲ್ಲಿ ವಾಸಾ ಯುದ್ಧನೌಕೆಯನ್ನು ಸಮುದ್ರದ ತಳದಿಂದ ರಕ್ಷಿಸಲಾಗಿತ್ತು. ಇದಾಗಿ ಎಷ್ಟೋ ವರ್ಷಗಳವರೆಗೆ ಈಗ ಇನ್ನೊಂದು ನೌಕೆ ಪತ್ತೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...