alex Certify ಮೆಕ್ಸಿಕೋ ಕಡಲ ತೀರದಲ್ಲಿ ಅತ್ಯಂತ ಆಳದ ನೀಲಿ ರಂಧ್ರ‌ ಪತ್ತೆ; ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಕ್ಸಿಕೋ ಕಡಲ ತೀರದಲ್ಲಿ ಅತ್ಯಂತ ಆಳದ ನೀಲಿ ರಂಧ್ರ‌ ಪತ್ತೆ; ಫೋಟೋ ವೈರಲ್

ಮೆಕ್ಸಿಕೋದ ಯುಕಾಟನ್ ಪರ್ಯಾಯ ದ್ವೀಪದಲ್ಲಿ ಜಗತ್ತಿನ ಎರಡನೇ ಅತ್ಯಂತ ಆಳವಾದ ನೀಲಿ ರಂಧ್ರ ಪತ್ತೆಯಾಗಿದೆ. 900 ಅಡಿ ಆಳ ಹಾಗೂ 1,47,000 ಚದರ ಅಡಿ ವಿಸ್ತಾರವಿರುವ ಈ ರಂಧ್ರವು ಚೆಟುಮಾಲ್ ಕೊಲ್ಲಿಯಲ್ಲಿ ಪತ್ತೆಯಾಗಿದೆ ಎಂದು ಲೈವ್‌ ಸೈನ್ಸ್‌ ನಿಯಕಾಲಿಕೆ ತಿಳಿಸಿದೆ.

ಈ ರಂಧ್ರಗಳಲ್ಲಿ ಅಲ್ಪ ಪ್ರಮಾಣದ ಆಮ್ಲಜನಕವಿದ್ದು, ಮೇಲ್ಮೈಯಲ್ಲಿ ಸೂರ್ಯನ ಬೆಳಕು ಪ್ರತಿಫಲಿಸುತ್ತದೆ. ಕಡಿಮೆ ಆಮ್ಲಜನಕದ ವಾತಾವರಣಕ್ಕೆ ಹೊಂದಿಕೊಂಡ ಜೀವರಾಶಿಗೆ ಈ ರಂಧ್ರಗಳು ಮನೆಯಾಗಿರುತ್ತವೆ.

ಅಧ್ಯಯನದ ಪ್ರಕಾರ ಇದು ಜಗತ್ತಿನ ಎರಡನೇ ಅತ್ಯಂತ ಆಳವಾದ ನೀಲಿ ರಂಧ್ರವಾಗಿದೆ. ದಕ್ಷಿಣ ಚೀನಾ ಸಮುದ್ರದ ’ಡ್ರ‍್ಯಾಗನ್ ಹೋಲ್’, 980 ಅಡಿ ಆಳ, ಜಗತ್ತಿನ ಅತ್ಯಂತ ಆಳವಾದ ರಂಧ್ರವಾಗಿದೆ.

ಸುಣ್ಣದ ಕಲ್ಲಿನಿಂದ ರಚಿಸಲ್ಪಟ್ಟ ಈ ರಂಧ್ರಗಳು ಬೆಳಕಿನ ಅಭಾವದಿಂದ ಹಾಗೂ ಮರಗಳು ಹಾಗೂ ಎಲೆಗಳ ಮೇಲೆ ಕೊಳೆಯುತ್ತಿರುವ ಹುಳುಗಳ ಕಾರಣದಿಂದ ಗಾಢ ನೀಲಿ ಬಣ್ಣದಲ್ಲಿ ಗೋಚರಿಸುತ್ತವೆ ಎಂದು ಡಿಸ್ಕವರಿಯ ಜಾಲತಾಣ ತಿಳಿಸುತ್ತದೆ.

ಸಾವಿರಾರು ವರ್ಷಗಳ ಹಿಂದೆ ಜೀವನ ಹೇಗಿತ್ತು ಎಂದು ಈ ನೀಲಿ ರಂಧ್ರಗಳು ತಿಳಿಸಲಿದ್ದು, ಅನ್ಯ ಗ್ರಹಗಳಲ್ಲಿನ ಜೀವವ್ಯವಸ್ಥೆಗಳ ಕುರಿತು ಅಂದಾಜು ನೀಡಬಹುದು ಎಂದು ಲೈವ್ಸ್‌ ಸೈನ್ಸ್ ವರದಿಯಲ್ಲಿ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...