alex Certify ತಲೆ ತಿರುಗಿಸುವಂತಿದೆ ಈ ಪಾರ್ಕಿಂಗ್​ ಸ್ಥಳದ ಬೆಲೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ತಿರುಗಿಸುವಂತಿದೆ ಈ ಪಾರ್ಕಿಂಗ್​ ಸ್ಥಳದ ಬೆಲೆ…..!

ಹಾಂಗ್​ಕಾಂಗ್​​​ನ ಪಾರ್ಕಿಂಗ್​​ ಜಾಗವೊಂದು ಬರೋಬ್ಬರಿ 10 ಮಿಲಿಯನ್​ ಹಾಂಗ್​ಕಾಂಗ್​ ಡಾಲರ್​​ ಅಂದರೆ 9.43 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಮೂಲಕ ಇದು ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಬೆಲೆಯ ಪಾರ್ಕಿಂಗ್​ ಜಾಗ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಹಾಂಗ್​ಕಾಂಗ್​ನ ದಿ ಪೀಕ್​ನಲ್ಲಿರುವ ವಿಶೇಷ ಮೌಂಟ್​ ನಿಕೋಲ್ಸನ್​ ಡೆವಲಪ್​ಮೆಂಟ್​ ಹಲವಾರು ಪಾರ್ಕಿಂಗ್​ ಪ್ರದೇಶವನ್ನ ಮಾರಾಟ ಮಾಡಿದೆ.

ಡೆವಲಪರ್​​ಗಳಾದ ವಾರ್ಫ್​ ಹಾಗೂ ನ್ಯಾನ್​ ಫಂಗ್​ ಗ್ರೂಪ್​ ಐಷಾರಾಮಿ ಯೋಜನೆಯ 2ನೆ ಹಾಗೂ 3ನೆ ಹಂತದಲ್ಲಿ 29ಪಾರ್ಕಿಂಗ್​ ಸ್ಥಳಗಳನ್ನ ಟೆಂಡರ್​ ಮೂಲಕ ಮನೆ ಮಾಲೀಕರಿಗೆ ಮಾರಾಟ ಮಾಡಿದೆ. ಇದರ ಮೊತ್ತವು 10 ಮಿಲಿಯನ್​ ಹಾಂಗ್​ಕಾಂಗ್​ ಡಾಲರ್​ಗಿಂತ ಹೆಚ್ಚು ಮೌಲ್ಯವನ್ನ ಹೊಂದಿದೆ ಎಂದು ಸೌತ್​ ಚೀನಾ ಮಾರ್ನಿಂಗ್​ ಪೋಸ್ಟ್ ವರದಿ ಮಾಡಿದೆ. 134.5 ಚದರ ಅಡಿ ಪಾರ್ಕಿಂಗ್​ ಸ್ಥಳ ಇದಾಗಿದ್ದು ಪ್ರತಿ ಚದರ ಅಡಿಗೆ 74350 ಡಾಲರ್ ಮೌಲ್ಯ ನಿಗದಿ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...