alex Certify ವಾರಕ್ಕೆ ನಾಲ್ಕೇ ದಿನ ಕೆಲಸದ ಅವಧಿ; ಭರ್ಜರಿ ಯಶಸ್ಸಿನ ಬಳಿಕ ಮುಂದುವರಿಕೆಗೆ UK ಕಂಪನಿಗಳ ಒಲವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರಕ್ಕೆ ನಾಲ್ಕೇ ದಿನ ಕೆಲಸದ ಅವಧಿ; ಭರ್ಜರಿ ಯಶಸ್ಸಿನ ಬಳಿಕ ಮುಂದುವರಿಕೆಗೆ UK ಕಂಪನಿಗಳ ಒಲವು

ಯುನೈಟೆಡ್ ಕಿಂಗ್ಡಮ್ ನ ಹಲವು ಕಂಪನಿಗಳು ಪರೀಕ್ಷಾರ್ಥವಾಗಿ ಕಳೆದ ಆರು ತಿಂಗಳಿನಿಂದ ತಮ್ಮ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನಗಳ ಮಾತ್ರ ಕೆಲಸದ ಅವಧಿಯನ್ನು ನೀಡಿದ್ದು, ಇದರಲ್ಲಿ ಭರ್ಜರಿ ಯಶಸ್ಸು ಸಾಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶೇಕಡ 92 ಕಂಪನಿಗಳು ಇದನ್ನೇ ಮುಂದುವರಿಸಿಕೊಂಡು ಹೋಗಲು ಬಯಸಿವೆ ಎಂದು ಹೇಳಲಾಗಿದೆ.

61 ಬೃಹತ್ ಕಂಪನಿಗಳು ಆರು ತಿಂಗಳ ಈ ಪೈಲೆಟ್ ಸ್ಕೀಮ್ ಅಡಿ ಜೂನ್ ನಿಂದ ಡಿಸೆಂಬರ್ ಅಂತ್ಯದವರೆಗೆ ಈ ನಿಯಮ ಅಳವಡಿಸಿಕೊಂಡಿದ್ದು, ಉದ್ಯಮದಲ್ಲಿ ಯಶಸ್ಸು ಕಾಣುವುದರ ಜೊತೆಗೆ ಉದ್ಯೋಗಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲೂ ಗಣನೀಯ ಸುಧಾರಣೆ ಕಂಡು ಬಂದಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ.

ಹೀಗಾಗಿ 61 ಕಂಪನಿಗಳ ಪೈಕಿ 56 ಕಂಪನಿಗಳು ಅರ್ಥಾತ್ ಶೇಕಡಾ 92 ಕಂಪನಿಗಳು ಇದನ್ನು ಮುಂದುವರಿಸಿಕೊಂಡು ಹೋಗಲು ಬಯಸಿವೆ. ಈ ಪೈಕಿ 18 ಕಂಪನಿಗಳು ಈ ನಿಯಮವನ್ನು ಶಾಶ್ವತವಾಗಿ ಅಳವಡಿಸಿಕೊಳ್ಳಲಿವೆ. ಕೇವಲ ಶೇಕಡ 4ರಷ್ಟು ಕಂಪನಿಗಳು ಮಾತ್ರ ಈ ಮೊದಲಿಗಿದ್ದ ನಿಯಮವನ್ನು ಮತ್ತೆ ಆರಂಭಿಸಲು ಚಿಂತಿಸಿವೆ.

ವಾರದಲ್ಲಿ ನಾಲ್ಕು ದಿನ ಕೆಲಸ ಮಾಡುವ ಈ ಪೈಲೆಟ್ ಸ್ಕೀಮ್ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಾಜೆಕ್ಟ್ ಎಂದು ಪರಿಗಣಿಸಲಾಗಿತ್ತು. ಬೋಸ್ಟನ್ ಕಾಲೇಜಿನ ಪ್ರೊಫೆಸರ್ ಜೂಲಿಯಟ್, ಆಕ್ಸ್ಫರ್ಡ್ ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳ ಸಂಶೋಧಕರ ಸಹಯೋಗದೊಂದಿಗೆ ಅಧ್ಯಯನ ನಡೆಸಿದ್ದರು.

ಈ ಪೈಲೆಟ್ ಸ್ಕೀಮ್ ನಲ್ಲಿ ಪಾಲ್ಗೊಂಡಿದ್ದ ಕಂಪನಿಗಳು ತಮ್ಮ ಅನುಭವವನ್ನು ಅಂಕಗಳ ಆಧಾರದ ಮೇಲೆ ನೀಡಿದ್ದು, 10ಕ್ಕೆ ಸರಾಸರಿ 8.5 ಅಂಕ ಬಂದಿದೆ. ಉತ್ಪಾದನೆಯಲ್ಲಿ ಸುಧಾರಿಸಿರುವ ಜೊತೆಗೆ ಆದಾಯದಲ್ಲೂ ಶೇ.35 ಏರಿಕೆ ಕಂಡು ಬಂದಿದೆ ಎಂದು ಹೇಳಿವೆ.

ಇನ್ನು ಉದ್ಯೋಗಿಗಳ ವಿಷಯಕ್ಕೆ ಬಂದರೆ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ. ಅಲ್ಲದೆ ಕಂಪನಿಗಳು ಈ ನಿಯಮ ಅಳವಡಿಸಿಕೊಂಡ ಬಳಿಕ ಒತ್ತಡ ರಹಿತರಾಗಿರುವುದರ ಜೊತೆಗೆ ಇತರೆ ದೈಹಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಹಿಳಾ ಉದ್ಯೋಗಿಗಳ ವಿಚಾರದಲ್ಲೂ ಗಮನಾರ್ಹ ಬದಲಾವಣೆ ಕಂಡು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...