alex Certify ವಿಡಿಯೋ ಚಿತ್ರೀಕರಣ ಮಾಡದಂತೆ ತಡೆದಿದ್ದಕ್ಕೆ ವಾರ್ಡನ್ ಮೇಲೆ ಹಲ್ಲೆ; ಯುವಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ ಚಿತ್ರೀಕರಣ ಮಾಡದಂತೆ ತಡೆದಿದ್ದಕ್ಕೆ ವಾರ್ಡನ್ ಮೇಲೆ ಹಲ್ಲೆ; ಯುವಕ ಅರೆಸ್ಟ್

ರಾಯಚೂರು: ಹಾಸ್ಟೇಲ್ ವಾರ್ಡನ್ ಮೇಲೆ ಹಲ್ಲೆ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರಿನ ಈಚನಾಳದಲ್ಲಿ ನಡೆದಿದೆ.

ಈಚನಾಳ ಗ್ರಾಮದ ಮಲ್ಲರೆಡ್ಡೆಪ್ಪ ಬಂಧಿತ ಆರೋಪಿ. ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೇಲ್ ಪರಿಶೀಲನೆಗೆ ಬಂಧಿದ್ದ ಅಧಿಕಾರಿಗಳ ಜೊತೆ ಯುವಕ ಮಲ್ಲರೆಡ್ಡಪ್ಪ ಬಂದಿದ್ದ. ಹಾಸ್ಟೇಲ್ ವಿಡಿಯೋ ಚಿತ್ರೀಕರಣ ಮಾಡಲು ಮುಂದಾಗಿದ್ದ. ಈ ವೇಳೆ ವಾರ್ಡನ್, ವಿಡಿಯೋ ಮಾಡದಂತೆ ತಡೆದಿದ್ದಾರೆ. ಈ ವೇಳೆ ಯುವಕ ವಾರ್ಡನ್ ಮೇಲೆ ಹೊಡೆದಿದ್ದ. ಇದರಿಂದ ವಾರ್ಡನ್ ಗಾಯಗೊಂಡಿದ್ದರು.

ಘಟನೆ ಬಗ್ಗೆ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...