alex Certify ಇಲ್ಲಿದೆ ಮೊಸಳೆ ಹಲ್ಲಿನ ಅಪರೂಪದ ಫೋಟೋ.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಮೊಸಳೆ ಹಲ್ಲಿನ ಅಪರೂಪದ ಫೋಟೋ.​..!

ಆಸ್ಟ್ರೇಲಿಯಾದ ಖ್ಯಾತ ವೈಲ್ಡ್​ಲೈಫ್​ ಫೋಟೋಗ್ರಾಫರ್​​ ರಾಬರ್ಟ್​ ಇರ್ವಿನ್​​ ತಮ್ಮ ಹೆಚ್ಚಿನ ಸಮಯವನ್ನ ಪ್ರಾಣಿಗಳ ಫೋಟೋ ತೆಗೆಯೋದ್ರಲ್ಲೇ ಕಾಲ ಕಳೆಯುತ್ತಾರೆ. ಈ ಫೋಟೋಗಳನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡುತ್ತಲೇ ಇರುವ ರಾಬರ್ಟ್ ಈ ಮೂಲಕ ತಮ್ಮ ಅಭಿಮಾನಿಗಳ ಕಣ್ಣಿಗೆ ಬಾಡೂಟವನ್ನೇ ಬಡಿಸ್ತಾರೆ.

ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​ಗಳ ಸಾಲಿಗೆ ಇತ್ತೀಚಿಗೆ ಹೊಸ ಸರಣಿಯನ್ನ ಸೇರಿಸಿದ್ದಾರೆ. ಈ ಭಾರಿ ಅವರು ಮೊಸಳೆಯ ಹಲ್ಲಿನ ಫೋಟೋವನ್ನ ಶೇರ್​ ಮಾಡಿದ್ದಾರೆ.

ಈ ಹಲ್ಲು ದೈತ್ಯಾಕಾರದಲ್ಲಿದೆ. ಈ ಹಲ್ಲಿನ ಫೋಟೋ ಹಂಚಿಕೊಂಡಿರುವ ರಾಬರ್ಟ್​, ಮೊಸಳೆಗಳು ತಮ್ಮ ಜೀವಿತಾವಧಿಯಲ್ಲಿ ಹಲ್ಲುಗಳನ್ನ ಕಳೆದುಕೊಂಡರೂ ಸಹ ಅವಕ್ಕೆ ಮತ್ತೆ ಹಲ್ಲುಗಳು ಹುಟ್ಟಿಕೊಳ್ಳುತ್ತದೆ. ದೈತ್ಯ ಮೊಸಳೆಯ ಬಾಯಿಯಲ್ಲಿ ಇಂತಹ 60 ಹಲ್ಲುಗಳು ಇವೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ರಾಬರ್ಟ್ ಶೇರ್ ಮಾಡಿರುವ ಈ ಮೊಸಳೆ ಹಲ್ಲಿನ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು 1 ಲಕ್ಷಕ್ಕೂ ಅಧಿಕ ಲೈಕ್ಸ್ ಸಂಪಾದಿಸಿದೆ. ಕಮೆಂಟ್​ ವಿಭಾಗದಲ್ಲೂ ಪ್ರಾಣಿ ಪ್ರಿಯರು ಮೊಸಳೆ ಹಲ್ಲನ್ನ ಕಂಡು ಆಶ್ಚರ್ಯ ಹೊರಹಾಕಿದ್ದಾರೆ.

View this post on Instagram

A post shared by Robert Irwin (@robertirwinphotography)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...