alex Certify ಅನಿಲ್​ ಕುಂಬ್ಳೆ ಪುತ್ರ ಮಾಯಾಸ್​ ಕುಂಬ್ಳೆಯ ʼಸಫಾರಿ ಸಾಗಾʼ ಪುಸ್ತಕ ಲೋಕಾರ್ಪಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಿಲ್​ ಕುಂಬ್ಳೆ ಪುತ್ರ ಮಾಯಾಸ್​ ಕುಂಬ್ಳೆಯ ʼಸಫಾರಿ ಸಾಗಾʼ ಪುಸ್ತಕ ಲೋಕಾರ್ಪಣೆ

ಟೀಂ ಇಂಡಿಯಾ ಮಾಜಿ ನಾಯಕ ಅನಿಲ್​ ಕುಂಬ್ಳೆ ಪುತ್ರ ಮಾಯಾಸ್​ ಕುಂಬ್ಳೆ ಬರೆದ ಸಫಾರಿ ಸಾಗಾ – ವೈಲ್ಡ್​ ಎನ್​ಕೌಂಟರ್ಸ್​ ಆಫ್​ ಎ ಯಂಗ್​ ಫೋಟೋಗ್ರಾಫರ್​ ಕಾಫಿ ಟೇಬಲ್​​ ಪುಸ್ತಕವನ್ನು ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್​ಮನ್​​ ವಿವಿಎಸ್​​ ಲಕ್ಷ್ಮಣ್​​ ಹಾಗೂ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಜಯಂತ್​ ಶರ್ಮಾ ಲೋಕಾರ್ಪಣೆಗೊಳಿಸಿದ್ದಾರೆ.

2017ರ ಮೇ ತಿಂಗಳಲ್ಲಿ ರಣಥಂಬೋರ್​​ಗೆ ಪ್ರವಾಸಕ್ಕೆ ತೆರಳಿದ ಬಳಿಕ ನನ್ನ ಜೀವನವು ಶಾಶ್ವತವಾಗಿ ಬದಲಾಯಿತು ಎಂದು ಮಾಯಾಸ್ ಈ ಸಂದರ್ಭದಲ್ಲಿ​ ಹೇಳಿದರು.

ಅನಿಲ್​ ಕುಂಬ್ಳೆ ಕೂಡ ಫೋಟೋಗ್ರಫಿ ವಿಭಾಗದಲ್ಲಿ ಆಸಕ್ತಿ ಹೊಂದಿದ್ದಾರೆ. ಅಪ್ಪ ಕೊಟ್ಟ ಕ್ಯಾಮರಾಗಳಿಂದ ಕಾಡಿನ ಸುಂದರ ಫೋಟೋಗಳನ್ನು ಸೆರೆಹಿಡಿದಿದ್ದ ಮಾಯಾಸ್​ ಇದೀಗ ಅದೇ ಚಿತ್ರಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ.

ಕಬಿನಿ ಅರಣ್ಯ ಪ್ರದೇಶದಲ್ಲಿರುವ ಕಪ್ಪು ಚಿರತೆಯ ಮೂಲಕ ಆರಂಭವಾಗುವ ಈ ಕೃತಿಯು ನದಿಯಲ್ಲಿರುವ ಹುಲಿ, ರಾಮನಗರದಲ್ಲಿ ಕ್ಲಿಕ್ಕಿಸಲಾದ ಆನೆ, ಕಾಡುಕೋಣ, ಸೀಳು ನಾಯಿ ಹಾಗೂ ವಿವಿಧ ಹಕ್ಕಿಗಳು ಹೀಗೆ ನಾನಾ ಫೋಟೋಗಳನ್ನು ಒಳಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...