alex Certify ಜನರ ಪರಿವೇ ಇಲ್ಲದೆ ರಸ್ತೆಯಲ್ಲೇ ಮಹಿಳೆ ಡಾನ್ಸ್: ವಿಡಿಯೋ ನೋಡಿ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನರ ಪರಿವೇ ಇಲ್ಲದೆ ರಸ್ತೆಯಲ್ಲೇ ಮಹಿಳೆ ಡಾನ್ಸ್: ವಿಡಿಯೋ ನೋಡಿ ನೆಟ್ಟಿಗರು ಫಿದಾ

ಕೋಲ್ಕತಾ: ಕೆಲವರಿಗೆ ನೃತ್ಯದಲ್ಲಿ ಅದೆಷ್ಟು ಆಸಕ್ತಿ ಇರುತ್ತದೆ ಎಂದರೆ ಎಲ್ಲಿಯೇ ಹಾಡು ಹಾಕಿದರೂ ಸಾಕು, ನಿಂತಲ್ಲೇ, ಕುಳಿತಲ್ಲೇ, ರಸ್ತೆ ಎನ್ನುವುದನ್ನೂ ನೋಡದೆ ನರ್ತಿಸಲು ಶುರು ಮಾಡುತ್ತಾರೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಕೋಲ್ಕತಾದ ಮಹಿಳೆಯೊಬ್ಬರು ಯಾದ್ ಆ ರಹಾ ಹೈ ಹಾಡಿಗೆ ಮನಸೋ ಇಚ್ಛೆ ಡಾನ್ಸ್​ ಮಾಡಿರುವ ವಿಡಿಯೋ ಇದಾಗಿದೆ. ನಗರದ ಪೂಜಾ ಮಂಟಪದ ಹೊರಗೆ ಹೋಗುತ್ತಿದ್ದ ವೇಳೆ ಅಲ್ಲಿ ಹಾಡು ಕೇಳಿ ರಸ್ತೆಯ ಮೇಲೆಯೇ ನರ್ತಿಸತೊಡಗಿದರು. ಅದನ್ನು ನೋಡುಗರೊಬ್ಬರು ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ.

ತಾನಿಯಾ ಮೈತ್ರಾ ಎಂಬುವವರು ವಿಡಿಯೋ ಶೇರ್​ ಮಾಡಿದ್ದು, ತಮಗೆ ಈ ಮಹಿಳೆಯ ಉತ್ಸಾಹ ನೋಡಿ ತುಂಬಾ ಖುಷಿಯಾಯಿತು ಎಂದು ಬರೆದುಕೊಂಡಿದ್ದಾರೆ. ಬಾಲಿವುಡ್​ನ ಖ್ಯಾತ ನಟ ಮಿಥುನ್ ಚಕ್ರವರ್ತಿ ಅವರ ಹಾಡಿಗೆ ಮಹಿಳೆಯೊಬ್ಬರು ನರ್ತಿಸಿದ್ದು ನಿಮ್ಮ ಹೃದಯವನ್ನೂ ಗೆಲ್ಲುತ್ತದೆ ಎಂದು ಅವರು ಹೇಳಿದ್ದಾರೆ.

ಜನರು ಈಕೆಯನ್ನು ನೋಡುತ್ತಾ, ನಗುತ್ತಾ ಸಾಗಿದ್ದರೂ ಅದ್ಯಾವುದಕ್ಕೂ ಕೇರೇ ಮಾಡದೇ ಮಹಿಳೆ ನರ್ತಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...