alex Certify ‘ಹೋಂ ಕ್ವಾರಂಟೈನ್’​ ನಿಯಮ ಉಲ್ಲಂಘಿಸಿದ ದ. ಆಫ್ರಿಕಾದಿಂದ ಮರಳಿದ ಮಹಿಳೆ….! ಹೆಚ್ಚಿದ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹೋಂ ಕ್ವಾರಂಟೈನ್’​ ನಿಯಮ ಉಲ್ಲಂಘಿಸಿದ ದ. ಆಫ್ರಿಕಾದಿಂದ ಮರಳಿದ ಮಹಿಳೆ….! ಹೆಚ್ಚಿದ ಆತಂಕ

ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಮರಳಿದ್ದ ಮಹಿಳೆಗೆ ಕಡ್ಡಾಯ ಹೋಂ ಕ್ವಾರಂಟೈನ್​​ನಲ್ಲಿ ಇರುವಂತೆ ಸೂಚನೆ ನೀಡಲಾಗಿತ್ತಾದರೂ ಸಹ ಆಕೆ ಸಮೀಪದ ಫೈವ್​ ಸ್ಟಾರ್​ ಹೋಟೆಲ್​​ ತೆರಳಿದ್ದಾರೆ ಎಂದು ಆರೋಪಿಸಲಾಗಿದೆ.

ಕೋವಿಡ್​ 19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಮಹಿಳೆಯ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದಾರೆ.

ಡಿಸೆಂಬರ್​ 1ರಂದು ದಕ್ಷಿಣ ಆಫ್ರಿಕಾದಿಂದ ಮರಳಿದ್ದ ಮಹಿಳೆಯು ಡಿಸೆಂಬರ್​ 2ರಂದು ಹೋಂ ಕ್ವಾರಂಟೈನ್​ ನಿಯಮಗಳನ್ನು ಉಲ್ಲಂಘಿಸಿ ಸಂಜೆ ಸುಮಾರಿಗೆ ಫೈವ್​ ಸ್ಟಾರ್​ ಹೋಟೆಲ್​ಗೆ ತೆರಳಿ ರಾತ್ರಿ ವೇಳೆಗೆ ವಾಪಸ್ಸಾಗಿದ್ದಾರೆ.

ಅಪಾಯಕಾರಿ ರಾಷ್ಟ್ರದಿಂದ ಹಿಂದಿರುಗಿರುವ ಈ ಮಹಿಳೆಯು ಕೋವಿಡ್​ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಮಹಿಳೆ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಹೋಟೆಲ್​ನ ಎಲ್ಲಾ ಸಿಬ್ಬಂದಿಗೆ ಆರ್​ಟಿ ಪಿಸಿಆರ್​ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ. ಡಿಸೆಂಬರ್​ 1ರಂದು ನಡೆಸಲಾದ ಪರೀಕ್ಷೆಯಲ್ಲಿ ಮಹಿಳೆಯ ಕೊರೊನಾ ವರದಿಯು ನೆಗೆಟಿವ್​ ಬಂದಿತ್ತು. ಆದರೂ ಸಹ ಸರ್ಕಾರದ ಮಾರ್ಗಸೂಚಿಯಂತೆ ಹೋಂ ಕ್ವಾರಂಟೈನ್​ನಲ್ಲಿರುವುದು ಕಡ್ಡಾಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...