alex Certify ನಿಶ್ಚಿತ ವರನಿಗೆ ಶಾಕ್​ ನೀಡಲು ಹೋಗಿ ನಗೆಪಾಟಲಿಗೀಡಾದ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಶ್ಚಿತ ವರನಿಗೆ ಶಾಕ್​ ನೀಡಲು ಹೋಗಿ ನಗೆಪಾಟಲಿಗೀಡಾದ ಯುವತಿ..!

ನಿಶ್ಚಿತ ವರನಿಗೆ ತಮಾಷೆ ಮಾಡಲು ಹೋಗಿ ಯುವತಿಯೇ ನಗೆಪಾಟಲಿಗೀಡಾಗಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ನಿಶ್ಚಿತ ವಧು ಮೋನಿಕಾ ಎಂಬಾಕೆ ತನ್ನ ಸಂಗಾತಿ ಸ್ಯಾಮ್​ ಮೇಲೆ ತಮಾಷೆ ಮಾಡಲು ಇಚ್ಛಿಸಿದಳು.

ತಾನು ಆತನಿಗೆ ಮೋಸ ಮಾಡುತ್ತಿದ್ದೇನೆ ಎಂದು ನಂಬಿಸಿದ್ರೆ ಆತನ ರಿಯಾಕ್ಷನ್​ ಏನಿರುತ್ತೆ ಎಂದು ತಿಳಿಯೋದು ಮೋನಿಕಾಳ ಉದ್ದೇಶವಾಗಿತ್ತು.

ಮೋನಿಕಾ ಮನೆಯಿಂದ ಸ್ಯಾಮ್​ ತನ್ನ ಕಾರಿನತ್ತ ವಾಪಸ್​ ಆಗುತ್ತಿದ್ದಂತೆಯೇ ಮೋನಿಕಾ, ಆತನಿಗೆ ಅನುಮಾನ ಬರುವ ರೀತಿಯಲ್ಲಿ ಮೆಸೇಜ್​ ಕಳುಹಿಸಿದ್ದಳು. ಅವನು ಹೊರಡುತ್ತಿದ್ದಾನೆ. ನೀನಿನ್ನು ಬರಬಹುದು ಎಂದು ಮೆಸೇಜ್​ನಲ್ಲಿ ಬರೆಯಲಾಗಿತ್ತು. ಈ ಮೆಸೇಜ್​ ನೋಡಿದ ಸ್ಯಾಮ್​ ನನ್ನ ಮೇಲೆ ಕ್ರೋಧಿತನಾಗಿರಬಹುದು ಎಂದು ಮೋನಿಕಾ ಭಾವಿಸಿದ್ದಳು.

ಮೆಸೇಜ್​ ನೋಡಿದ ಸ್ಯಾಮ್​​ ಮೋನಿಕಾಳ ಮನೆಗೆ ವಾಪಸ್ಸಾಗಿದ್ದಾನೆ. ಮತ್ತೆ ತನ್ನ ನಾಟಕವನ್ನ ಮುಂದುವರಿಸಿದ ಮೋನಿಕಾ, ಅಯ್ಯೋ ನೀನು ಮನೆಯಿಂದ ತೆರಳಿದೆ ಎಂದುಕೊಂಡಿದ್ದೆ ಎಂದು ಹೇಳಿದ್ದಾಳೆ. ಅದಕ್ಕೆ ಸ್ಯಾಮ್​ ನಾನು ಮನೆಯಿಂದ ಹೊರಟಿದ್ದೆ. ಆದರೆ ನಿನ್ನ ಮೆಸೇಜ್​ ನೋಡಿ ವಾಪಸ್ಸಾದೆ ಎಂದು ಪ್ರತ್ಯುತ್ತರ ನೀಡಿದ್ದಾನೆ.

ಈಗ ಸ್ಯಾಮ್​ ಜಗಳ ಮಾಡುತ್ತಾನೆ ಎಂದು ಮೋನಿಕಾ ಭಾವಿಸಿದ್ದಳು ಆದರೆ ಆತ ಮಾತ್ರ ನೀನು ನನ್ನ ಬರ್ತಡೇ ಪಾರ್ಟಿ ನೀಡಲು ಪ್ಲಾನ್​ ಮಾಡುತ್ತಿದ್ದೀಯಾ ಎಂದು ಕೇಳಿದ್ದಾನೆ. ಅದಕ್ಕೆ ಮೋನಿಕಾ ನಿನ್ನ ಬರ್ತಡೇ ಮುಗಿದು ಹೋಗಿದೆ ಎಂದು ಹೇಳಿದ್ದಾಳೆ. ಬರ್ತಡೇ ಮುಗಿದ್ರೆ ಏನಂತೆ ಸೆಲೆಬ್ರೇಟ್​ ಮಾಡಬಾರದು ಎಂದೇನಿದೆ..? ನಂಗೊತ್ತು ನೀನು ಮಾಡುತ್ತೀಯಾ..? ಐ ಲವ್​ ಯೂ ಎಂದು ಹೇಳಿ ಮನೆಯಿಂದ ಮತ್ತೆ ತೆರಳಿದ್ದಾನೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ತನ್ನ ಪತ್ನಿಯಾಗುವವಳ ಮೇಲೆ ಸ್ಯಾಮ್​ಗಿರುವ ನಂಬಿಕೆ ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...