alex Certify ಅನ್ಯಗ್ರಹ ಜೀವಿಗಳ ವಾಹನವೆಂದು ಭಾವಿಸಿದ್ದ ಮಹಿಳೆಗೆ ಟಿವಿ ಹಾಕಿದಾಗ ಅರಿವಾಯ್ತು ಅಸಲಿ ಸತ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ಯಗ್ರಹ ಜೀವಿಗಳ ವಾಹನವೆಂದು ಭಾವಿಸಿದ್ದ ಮಹಿಳೆಗೆ ಟಿವಿ ಹಾಕಿದಾಗ ಅರಿವಾಯ್ತು ಅಸಲಿ ಸತ್ಯ…!

ರಾತ್ರಿ ವೇಳೆ ತಾಜಾ ಗಾಳಿ ಸೇವನೆಗಾಗಿ ಮನೆಯಿಂದ ಹೊರಬಂದ ಜೇನ್‌ ಡಿಕಿನ್‌ಸನ್‌ಗೆ ಮನೆಯ ಮೇಲಿನ ಆಕಾಶದಲ್ಲಿ ಬಿಳಿಯಾದ, ಪ್ರಕಾಶಮಾನವಾದ ಬೆಳಕು ಕಂಡಿತ್ತು. ಕ್ಷಣಕಾಲ ಅಚ್ಚರಿಗೊಂಡ ಜೇನ್‌, ಆತಂಕದಿಂದ ಮನೆಯೊಳಗೆ ಓಡಿದ್ದಳು.

ರಾತ್ರಿ ವೇಳೆ ಇಷ್ಟೊಂದು ಬೆಳಕು ಬರುತ್ತಿದೆ ಎಂದರೆ ಅನ್ಯಗ್ರಹ ಜೀವಿಗಳ ವಾಹನವೇ ಇರಬೇಕು ಎಂದು ಆಕೆಯ ಮನಸ್ಸಿನಲ್ಲಿ ಆಲೋಚನೆ ಸುಳಿದಿತ್ತು. ಮತ್ತೆ ಹೊರಹೋಗಿ ಆಕೆಯು ತನ್ನ ಕ್ಯಾಮೆರಾದಲ್ಲಿ ಬೆಳಕನ್ನು ಸೆರೆಹಿಡಿದಳು.

ಏಲಿಯನ್ಸ್‌ ವಾಹನವನ್ನು ಪತ್ತೆ ಮಾಡಿದೆ ಎಂದು ಉದ್ವೇಗದಿಂದ ಮನೆಯೊಳಗೆ ಬಂದು ಕುಳಿತಿದ್ದ ಜೇನ್‌ಗೆ ಅಚ್ಚರಿ ಕಾದಿತ್ತು.

ಟಿವಿ ಹಾಕಿ ನೋಡಿದಾಗ, ಕೆಲ ನಿಮಿಷಗಳ ಮುನ್ನ ಅಮೆರಿಕದ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ’ನಾಸಾ’ದಿಂದ ಲ್ಯಾಂಡ್‌ಸ್ಯಾಟ್‌ -9 ಉಪಗ್ರಹ ಯಶಸ್ವಿ ಉಡಾವಣೆ ಆಗಿರುವ ಸುದ್ದಿ ಪ್ರಸಾರವಾಗುತ್ತಿತ್ತು. ಕ್ಯಾಲಿಫೊರ್‍ನಿಯಾದಿಂದ ಉಪಗ್ರಹ ಹೊತ್ತ ರಾಕೆಟ್‌ ಉಡಾವಣೆಗೊಂಡಿತ್ತು. ರಾತ್ರಿ 10.30ಕ್ಕೆ ಅಮೆರಿಕದ ಹಲವು ರಾಜ್ಯಗಳಲ್ಲಿ ಇದು ಪ್ರಕಾಶಮಾನವಾದ ಬೆಳಕಿನ ಮಾದರಿಯಲ್ಲಿ ಗೋಚರಿಸಿದೆ ಎಂದು ನಿರೂಪಕರು ಹೇಳುತ್ತಿದ್ದರು.

BIG NEWS: ಇಂಜಿನಿಯರಿಂಗ್​ ಕಾಲೇಜುಗಳ ಶುಲ್ಕದ ವಿಚಾರವಾಗಿ ಮಹತ್ವದ ಘೋಷಣೆ ಹೊರಡಿಸಿದ ಡಾ. ಅಶ್ವತ್ಥ ನಾರಾಯಣ

ಇದರಿಂದ ಠುಸ್‌ ಪಟಾಕಿಯಂತೆ ಆದ ಜೇನ್‌ಗೆ, ತನ್ನ ಕೌತುಕದ ಅಸಲಿಯತ್ತು ತಿಳಿದುಬಂದು ಕೊಂಚ ಅಸಮಾಧಾನ ಕೂಡ ಕಾಡಿತ್ತು. ನಾಟಿಂಗ್‌ಹ್ಯಾಮ್‌, ಲಿಸೆಸ್ಟರ್‌ಶೈರ್‌, ಹುಲ್‌ ಮತ್ತು ಸ್ವಾನ್‌ಸೀ ಪ್ರದೇಶಗಳಲ್ಲಿ ರಾಕೆಟ್‌ನಿಂದ ಹೊರಬಂದ ಬೆಳಕು ಗೋಚರಿಸಿದೆ. ಇದನ್ನೇ ಬಹಳ ಮಂದಿ ಅನ್ಯಗ್ರಹ ಜೀವಿಗಳ ಆಕಾಶಕಾಯಗಳು ಎಂದು ಭಾವಿಸಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...