alex Certify ತಂದೆಗಾಗಿ ಈ ಮಗಳು ಮಾಡ್ತಿರೋ ಕೆಲಸ ನೋಡಿದ್ರೆ ಶಾಕ್​ ಆಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಗಾಗಿ ಈ ಮಗಳು ಮಾಡ್ತಿರೋ ಕೆಲಸ ನೋಡಿದ್ರೆ ಶಾಕ್​ ಆಗ್ತೀರಾ..!

ಕೊರೊನಾ ವೈರಸ್​ ಕಾರಣದಿಂದಾಗಿ ಆಸ್ಪತ್ರೆಗಳಲ್ಲಿ ರೋಗಿಗಳ ಭೇಟಿಗೆ ಸಾಕಷ್ಟು ನಿರ್ಬಂಧಗಳನ್ನ ವಿಧಿಸಲಾಗಿದೆ. ಇದೇ ಕಾರಣಕ್ಕೆ ಲಿಸಾ ಎಂಬ ಮಹಿಳೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ತಂದೆಯನ್ನ ನೋಡೋಕೆ ಸಾಧ್ಯವಾಗಿರಲಿಲ್ಲ. ತನ್ನ ತಂದೆಯ ಆರೈಕೆ ಮಾಡಬೇಕು ಎಂಬ ಕಾರಣಕ್ಕೆ ಲಿಸಾ ಅದೇ ಆಸ್ಪತ್ರೆಯಲ್ಲಿ ಪಾರ್ಟ್ ಟೈಂ ನರ್ಸ್​ ಆಗಿ ಕೆಲಸಕ್ಕೆ ಸೇರಿದ್ದಾರೆ.

58 ವರ್ಷದ ಲಿಸಾ ವೃತ್ತಿಯಲ್ಲಿ ಪ್ರಾಜೆಕ್ಟ್ ಮ್ಯಾನೆಜರ್​ ಆಗಿದ್ದಾರೆ. ಆದರೆ, ತಂದೆಗಾಗಿ ತನ್ನ ಕೆಲಸದ ಅವಧಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡ ಲಿಸಾ ಡಿಸೆಂಬರ್​ 1 ರಂದು ಪಾರ್ಟ್​ ಟೈಂ ನರ್ಸ್ ಆಗಿ ಕೆಲಸಕ್ಕೆ ಸೇರಿದ್ದಾರೆ.

ಈಕೆ ವಾರದಲ್ಲಿ 2 ಇಲ್ಲವೇ 3 ದಿನಗಳ ಕಾಲ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾಳೆ. ಪಾತ್ರೆ ತೊಳೆಯೋದು, ನೆಲ ಒರೆಸೋದು, ಊಟ ಬಡಿಸೋದು ಸೇರಿದಂತೆ ವಿವಿಧ ಕೆಲಸಗಳನ್ನ ಮಾಡ್ತಾರೆ. ಅಂದ ಹಾಗೆ, ಈ ಕೆಲಸಗಳನ್ನ ಮಾಡೋದು ಲೀಸಾಗೆ ಸುಲಭವಂತೂ ಆಗಿರಲಿಲ್ಲ. ಆದರೆ, ಇದರಿಂದ ತನ್ನ 87 ವರ್ಷದ ತಂದೆಯನ್ನ ನೋಡಲು ಸಾಧ್ಯವಾಗುತ್ತೆ ಎಂಬ ಒಂದೇ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾಳೆ.

ನಾನೊಂದು ಹೊಸ ಅಭ್ಯಾಸವನ್ನ ರೂಢಿಸಿಕೊಂಡಿದ್ದೇನೆ. ಕೆಲಸದ ಅವಧಿಗಿಂತ ಕೆಲ ನಿಮಿಷ ಮೊದಲೇ ಆಸ್ಪತ್ರೆಗೆ ಹಾಜರಾಗುತ್ತೇನೆ. ಈ ಅವಧಿಯಲ್ಲಿ ನನ್ನ ತಂದೆಯನ್ನ ನೋಡುತ್ತೇನೆ. ಇದಾದ ಬಳಿಕ ಕೆಲಸವನ್ನೆಲ್ಲಾ ಮುಗಿಸಿ ಮತ್ತೊಮ್ಮೆ ನನ್ನ ತಂದೆಯನ್ನ ಭೇಟಿಯಾಗ್ತೇನೆ ಎಂದು ಲಿಸಾ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...