alex Certify 37 ವರ್ಷಗಳ ಕಾಲ ಮಹಿಳೆ ಮೂಗಿನಲ್ಲಿತ್ತು ಪ್ಲಾಸ್ಟಿಕ್‌ ನಾಣ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

37 ವರ್ಷಗಳ ಕಾಲ ಮಹಿಳೆ ಮೂಗಿನಲ್ಲಿತ್ತು ಪ್ಲಾಸ್ಟಿಕ್‌ ನಾಣ್ಯ

ಸುಮಾರು 40 ವರ್ಷಗಳ ಕಾಲ ತಮ್ಮ ಮೂಗಿನಲ್ಲಿ ಪ್ಲಾಸ್ಟಿಕ್ ಗೇಮ್ ಒಂದರ ಕಾಯಿನ್ ಇಟ್ಟುಕೊಂಡು ಕಾಲ ಕಳೆದ ಮಹಿಳೆಯೊಬ್ಬರಿಗೆ ಈ ವಿಷಯ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಹೋದಾಗ ತಿಳಿದುಬಂದಿದೆ.

ಮೇರಿ ಮ್ಯಾಕ್‌ಕಾರ್ಥಿ ಹೆಸರಿನ ಈ ಮಹಿಳೆ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನವರಾಗಿದ್ದು, ಕಳೆದ 37 ವರ್ಷಗಳಿಂದ ತಮ್ಮ ಮೂಗಿನ ಬಲಭಾಗಲ್ಲಿ ನೋವು ಅನುಭವಿಸಿಕೊಂಡು ಬಂದಿದ್ದಲ್ಲದೇ ಅನೇಕ ಬಾರಿ ಉಸಿರಾಟದ ತೊಂದರೆಗಳನ್ನೂ ಅನುಭವಿಸಿದ್ದಾರೆ.

ಹಿತಮಿತವಾದ ʼಆಹಾರʼ ಸದೃಢ ಆರೋಗ್ಯಕ್ಕೆ ಸರಳ ಮಾರ್ಗ

ಕಳೆದ ವರ್ಷ ಕೋವಿಡ್-19 ಪರೀಕ್ಷೆಗೆ ಮೂಗಿನ ಸ್ವಾಬ್ ಪರೀಕ್ಷೆಗೆ ಒಳಗಾದಾಗಿನಿಂದ ಈ ಮಹಿಳೆಗೆ ಮೂಗಿನಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ಏನಾಗಿದೆ ಎಂದು ಸಿಟಿ ಸ್ಕ್ಯಾನ್ ಮೂಲಕ ಪರೀಕ್ಷಿಸಿ ನೋಡಿದಾಗ ಆಕೆಯ ಮೂಗಿನಲ್ಲಿ ಪ್ಲಾಸ್ಟಿಕ್ ಕಾಯಿನ್ ಇರುವುದು ಗೊತ್ತಾಗಿದೆ.

18,000 ರೂ.ಗೆ ದೈತ್ಯ ಶಂಖದ ಹುಳು ಹರಾಜು

ಬಾಲ್ಯದಲ್ಲಿ ತನ್ನ ಸಹೋದರರೊಂದಿಗೆ ಟಿಡ್ಡಿವಿಂಕ್ ಆಟವಾಡುತ್ತಿದ್ದ ತಾನು, ಒಂದೊಮ್ಮೆ ಈ ಆಟದ ಪ್ಲಾಸ್ಟಿಕ್ ಕಾಯಿನ್‌ಗಳನ್ನು ತಮ್ಮ ಮೂಗಿನ ಹೊಳ್ಳೆಗಳಿಗೆ ಹಾಕಿಕೊಂಡು ಅವೆಷ್ಟು ದೂರ ಹಾರುತ್ತವೆ ಎಂದು ನೋಡಲು ಹೋದಾಗ, ಅಕಸ್ಮಾತ್‌ ಆಗಿ ನಾಣ್ಯವೊಂದನ್ನು ಒಳಗೆಳೆದುಕೊಂಡುಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...