alex Certify ಸಾಲಕ್ಕೆ ಸಂಬಂಧಿಸಿದಂತೆ ಶಾಕಿಂಗ್‌ ಘಟನೆ; ಪರಸ್ಪರರ ಪತ್ನಿಯರ ಜೊತೆ ಪತಿಯಂದಿರ ಲೈಂಗಿಕ ಶೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲಕ್ಕೆ ಸಂಬಂಧಿಸಿದಂತೆ ಶಾಕಿಂಗ್‌ ಘಟನೆ; ಪರಸ್ಪರರ ಪತ್ನಿಯರ ಜೊತೆ ಪತಿಯಂದಿರ ಲೈಂಗಿಕ ಶೋಷಣೆ

ಮಾಡಿದ ಸಾಲವನ್ನು ತೀರಿಸದ ಆರೋಪದ ಮೇಲೆ ಪರಸ್ಪರ ಪತ್ನಿಯರನ್ನು ಆರೋಪಿಗಳು ಅತ್ಯಾಚಾರ ಮಾಡಿರುವ ಆರೋಪ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ತನ್ನ ಪತಿ ಸಾಲವನ್ನು ಮರುಪಾವತಿಸಲು ವಿಫಲವಾದ ಕಾರಣ ತನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ 32 ವರ್ಷದ ಮಹಿಳೆಯೊಬ್ಬರು ಪುರುಷನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಶಹಜಹಾನಾಬಾದ್ ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಇದೇ ಆರೋಪಿಯ ವಿರುದ್ದ ಮಹಿಳೆಯ ದೂರಿನ ಮೇರೆಗೆ ಹನುಮಂಗಂಜ್ ಠಾಣೆ ಪೊಲೀಸರು ಇದೇ ಪ್ರಕರಣ ದಾಖಲಿಸಿಕೊಂಡಿದ್ದರು. ತನ್ನ ಪತಿ ಸಾಲವನ್ನು ಮರುಪಾವತಿ ಮಾಡದ ಕಾರಣ ಇನ್ನೊಬ್ಬ ವ್ಯಕ್ತಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಆಕೆ ಕೂಡ ಆರೋಪಿಸಿದ್ದಳು.

ಸಹಾಯಕ ಪೊಲೀಸ್ ಕಮಿಷನರ್ ಉಮೇಶ್ ತಿವಾರಿ ಪ್ರತಿಕ್ರಿಯಿಸಿ ,ಮಹಿಳೆ ತನ್ನ ದೂರಿನಲ್ಲಿ ತನ್ನ ಪತಿ ಸಾಲ ಪಡೆದಿದ್ದು ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಆರೋಪಿತ ವ್ಯಕ್ತಿ ಈ ವರ್ಷದ ಅಕ್ಟೋಬರ್‌ನಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ದೂರಿರುವುದಾಗಿ ತಿಳಿಸಿದ್ದಾರೆ.

ಆರೋಪಿಯ ಪತ್ನಿ ಎರಡು ದಿನಗಳ ಹಿಂದೆ ಹನುಮಂಗಂಜ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯ ವಿರುದ್ಧ ಇದೇ ರೀತಿಯ ದೂರು ದಾಖಲಿಸಿದ್ದರು ಎಂದು ಎಸಿಪಿ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹಣದ ವಿಚಾರವಾಗಿ ಇಬ್ಬರು ವ್ಯಕ್ತಿಗಳು ಪರಸ್ಪರ ಪತ್ನಿಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...