alex Certify ಸಾಯುವ ಸ್ಥಿತಿಯಲ್ಲಿದ್ದಾಗ ಸಹಾಯಕ್ಕೆ ಬಂದ ಅಪರಿಚಿತ; ಪವಾಡ ಅಂದ್ರೆ ಇದೇ ಅಲ್ವಾ ಎಂದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಯುವ ಸ್ಥಿತಿಯಲ್ಲಿದ್ದಾಗ ಸಹಾಯಕ್ಕೆ ಬಂದ ಅಪರಿಚಿತ; ಪವಾಡ ಅಂದ್ರೆ ಇದೇ ಅಲ್ವಾ ಎಂದ ಯುವತಿ

ಕೆಲವೊಮ್ಮ ಜೀವನದಲ್ಲಿ ವಿಚಿತ್ರ ಎನ್ನುವ ಘಟನೆಗಳು ನಡೆದುಬಿಡುತ್ತವೆ. ಇದು ಕನಸೋ, ನನಸೋ ಎನ್ನುವಂಥ ಪವಾಡಗಳೂ ನಡೆಯುತ್ತವೆ. ಅಂಥದ್ದೇ ಒಂದು ಘಟನೆಯನ್ನು ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಅದೀಗ ವೈರಲ್​ ಆಗಿದೆ.

ರಾಚೆಲ್ ಪಿಘಿಲ್ಸ್ ಎಂಬಾಕೆ ತನ್ನ ಜೀವನದ ಘಟನೆಯನ್ನು ವಿವರಿಸಿದ್ದಾಳೆ. ಸೀಲಿಂಗ್​ ಫ್ಯಾನ್​ ಈಕೆಯ ಮೇಲೆ ಬಿದ್ದು ಜೀವನ್ಮರಣ ಸ್ಥಿತಿ ನಡುವೆ ರಾಚೆಲ್​ ಹೋರಾಡುತ್ತಿದ್ದಳು. ಕೂಡಲೇ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಶಾಶ್ವತವಾಗಿ ಅಂಗವಿಕಲೆಯಾಗುವ ಸಾಧ್ಯತೆ ಇತ್ತು. ಈಕೆಗಾಗಿ ಒಂದು ಕಾಯಂ ಅಂಬುಲೆನ್ಸ್​ ಖರೀದಿಸುವ ಅಗತ್ಯವಿತ್ತು. ಅದಕ್ಕಾಗಿ ಈಕೆಯ ಪತಿ ಸಾಲ ಸೋಲ ಮಾಡಿ £ 350,000 (ಸುಮಾರು 2.85 ಕೋಟಿ ರೂ.) ಸಂಗ್ರಹಿಸಿದರು.

ಆದರೆ ಶಸ್ತ್ರಚಿಕಿತ್ಸೆಗೆ ಕೋಟ್ಯಂತರ ರೂಪಾಯಿ ಅಗತ್ಯವಿತ್ತು. ಆಗ ನಡೆದದ್ದೇ ಪವಾಡ ಎಂದು ರಾಚೆಲ್​ ವಿವರಿಸಿದ್ದಾಳೆ. ಪತಿಗೆ ಮತ್ತಷ್ಟು ಹಣ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಆಗ ತನಗೆ ಗೊತ್ತೇ ಇಲ್ಲದ ವ್ಯಕ್ತಿಯೊಬ್ಬರು £160,000 (1.56 ಕೋಟಿಗಳು) ನೀಡಿದ್ದು ಇದು ತನ್ನ ಜೀವನದ ಪವಾಡ ಎಂದು ಈಕೆ ಹೇಳಿಕೊಂಡಿದ್ದಾಳೆ.

ತಲೆಯ ಹಿಂಭಾಗಕ್ಕೆ ಪೆಟ್ಟು ಬಿದ್ದಿದ್ದರಿಂದ ಮೆದುಳು ಹಾಗೂ ಬೆನ್ನುಮೂಳೆ ಒಂದಕ್ಕೊಂದು ಸೇರಿಕೊಂಡು ತೊಂದರೆ ಅನುಭವಿಸಿದ ಸಂದರ್ಭದಲ್ಲಿ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬ ಹಣ ನೀಡಿ ತನ್ನ ಜೀವವನ್ನು ಕಾಪಾಡಿದ್ದಾನೆ. ಇದರಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದ್ದು, ತಾನು ಪ್ರಾಣಾಪಾಯದಿಂದ ಪಾರಾದೆ ಎಂದು ರಾಚೆಲ್​ ಹೇಳಿದ್ದಾಳೆ. ದೇವರು ಇದ್ದಾನೆ ಎನ್ನುವುದು ಇದಕ್ಕೇನೇ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...