alex Certify ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತೆ ಈ ಅಪಘಾತದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತೆ ಈ ಅಪಘಾತದ ವಿಡಿಯೋ

ಅಪಘಾತಗಳು ಹೇಗೆ, ಯಾವಾಗ ಆಗುತ್ತದೆ ಎಂದು ಹೇಳುವುದೇ ಕಷ್ಟ. ಅದರಲ್ಲಿಯೂ ವಾಹನದಲ್ಲಿ ಚಲಿಸುವಾಗ ಚಿತ್ರ ವಿಚಿತ್ರ ರೀತಿಯಲ್ಲಿ ಅಪಘಾತಗಳು ಸಂಭವಿಸುತ್ತವೆ. ಕೆಲವೊಮ್ಮೆ ನೋಡುಗರನ್ನು ತಮಾಷೆಗೆ ತಳ್ಳುವ ಅಪಘಾತಗಳೂ ನಡೆಯುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹುಡುಗಿಯೊಬ್ಬಳು ನಿಂತಿದ್ದ ಟ್ರಕ್​ಗೆ ಬಂದು ಡಿಕ್ಕಿ ಹೊಡೆದ ಘಟನೆ ಇದಾಗಿದೆ. ನಿಂತಿರುವ ವಾಹನಕ್ಕೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆಯುವುದು ದೊಡ್ಡ ವಿಷಯವಲ್ಲ. ಇಂಥ ಡಿಕ್ಕಿಯಿಂದಾಗಿ ಪ್ರಾಣ ಕೂಡ ಹೋಗುವುದಿದೆ. ಅಂಥ ಅಪಾಯಕಾರಿ ಎನಿಸುವ ಅಪಘಾತಗಳೂ ನಡೆಯುತ್ತವೆ. ಅಂಥ ಅಪಘಾತಗಳನ್ನು ನೋಡಿದರೆ ಎಂಥವರನ್ನೂ ಬೆಚ್ಚಿಬೀಳಿಸುತ್ತದೆ. ಆದರೆ ಈ ಅಪಘಾತ ಮಾತ್ರ ನಗೆಗಡಲಿನಲ್ಲಿ ತೇಲಿಸುವಂತಿದೆ.

16 ಸೆಕೆಂಡುಗಳ ಈ ವಿಡಿಯೋದಲ್ಲಿ ಕಸದ ಟ್ರಕ್‌ವೊಂದು ರಸ್ತೆಯ ಮಧ್ಯದಲ್ಲಿ ಸಿಲುಕಿಕೊಂಡಿರುತ್ತದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ದ್ವಿಚಕ್ರ ವಾಹನ ಸವಾರರು ಮಾತ್ರ ಸರ್ಕಸ್​ ಮಾಡಿ ಹೋಗುವಷ್ಟು ದಾರಿ ಇದೆ. ಹಲವು ವಾಹನ ಸವಾರರು ಅಲ್ಲಿಂದ ಸಲೀಸಾಗಿ ಹೋಗುತ್ತಾರೆ.

ಆದರೆ ಯುವತಿಯೊಬ್ಬಳು ದ್ವಿಚಕ್ರವಾಹನದಲ್ಲಿ ಆ ಬಸ್ಸಿನ ಬದಿಯಿಂದ ಬರುವಾಗ ಎಕ್ಸಲರೇಟರ್​ ಜೋರಾಗಿ ಕೊಡುತ್ತಾಳೆ. ಆ ವೇಗಕ್ಕೆ ಆಕೆಯ ವಾಹನ ಮುಂದೆ ಚಲಿಸಿ ಟರ್ನ್​ ಹೊಡೆದು ಟ್ರಕ್​ಗೆ ಬಂದು ಗುದ್ದುತ್ತದೆ. ಯಾರಿಗೂ ಏನೂ ಅಪಾಯ ಆಗುವುದಿಲ್ಲ. ಆದರೆ ನೋಡುಗರಿಗೆ ಮಾತ್ರ ಇದು ತಮಾಷೆಯಾಗಿ ಕಾಣಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...