alex Certify ಹಳೆ ಗೊಂಬೆಯ ಬೆಲೆ ಕೇಳಿದ ಮಹಿಳೆಗೆ ಶಾಕ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ಗೊಂಬೆಯ ಬೆಲೆ ಕೇಳಿದ ಮಹಿಳೆಗೆ ಶಾಕ್….!

ಬ್ರಿಟನ್​​ನ ಆಂಟಿಕ್ಸ್​ ರೋಡ್​ಶೋನ ಅತಿಥಿಯೊಬ್ಬರು ತಮ್ಮ ಬಳಿ ಇರುವ ಹಳೆಯ ಬಾರ್ಬಿ ಗೊಂಬೆಯ ಮೌಲ್ಯ ಬರೋಬ್ಬರಿ 1.5 ಲಕ್ಷ ರೂಪಾಯಿ ಎಂದು ತಿಳಿದು ಶಾಕ್​ ಆಗಿದ್ದಾರೆ.

ಹಳೆಯ ಗೊಂಬೆಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಈ ಮಹಿಳೆ ಕೂಡ 1960ರ ದಶಕದಲ್ಲಿ ತಾನು ಖರೀದಿ ಮಾಡಿದ್ದ ಗೊಂಬೆಯನ್ನ ತಂದಿದ್ದರು.

5 ದಶಕಗಳ ಹಿಂದಿನ ಗೊಂಬೆಯು ಇನ್ನೂ ಚೆನ್ನಾಗಿಯೇ ಇರೋದನ್ನ ಕಂಡು ಖುಷಿಪಟ್ಟ ತಜ್ಞ ಜ್ಯುಡಿತ್​ ಮಿಲ್ಲರ್​ ಎಂಬವರು, 5 ದಶಕಗಳ ಹಿಂದಿನ ಬಾರ್ಬಿ ಗೊಂಬೆಯು ಇಷ್ಟು ಒಳ್ಳೆಯ ಸ್ಥಿತಿಯಲ್ಲಿ ಇದ್ದಿದ್ದನ್ನು ನಾನು ಕಂಡೇ ಇಲ್ಲ ಎಂದು ಆಶ್ಚರ್ಯ ಹೊರಹಾಕಿದ್ರು.

ಮಿಲ್ಲರ್​ ಬಳಿಕ ಈ ಗೊಂಬೆಯು 1.5 ಲಕ್ಷ ರೂಪಾಯಿ ಬೆಲೆಬಾಳಲಿದೆ ಎಂದು ಹೇಳಿದ್ದಾರೆ. ಗೊಂಬೆಯ ಪ್ರಸ್ತುತ ಮೌಲ್ಯವನ್ನ ಕೇಳಿದ ಮಹಿಳೆ ಒಮ್ಮೆಲೆ ದಿಗ್ಬ್ರಾಂತರಾಗಿದ್ದಾರೆ. ಕೆಲ ಕ್ಷಣಗಳ ಕಾಲ ಮಹಿಳೆ ಮಿಲ್ಲರ್​ ಹೇಳಿದ್ದನ್ನ ನಂಬಲಾರದೇ ಹೋಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...