alex Certify ಮೊಬೈಲ್ ಫೋನ್ ನಿರಂತರ ಬಳಕೆ; ವಿರೋಧಿಸಿದ್ದಕ್ಕೆ ಅತ್ತೆಯನ್ನು‌ ಕೊಂದ ಸೊಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಫೋನ್ ನಿರಂತರ ಬಳಕೆ; ವಿರೋಧಿಸಿದ್ದಕ್ಕೆ ಅತ್ತೆಯನ್ನು‌ ಕೊಂದ ಸೊಸೆ

ಇದೊಂದು ವಿಚಿತ್ರ ಕಾರಣಕ್ಕೆ ಕೊಲೆ ನಡೆದಿದೆ. ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಅತ್ತೆಯನ್ನು ಮನೆಯಲ್ಲಿಯೇ ಕೊಂದಿದ್ದಾರೆ. ಏಕೆಂದರೆ, ತಡರಾತ್ರಿಯಲ್ಲೂ ಮೊಬೈಲ್ ಫೋನ್‌ನಲ್ಲಿ ನಿರಂತರವಾಗಿ ಮಾತನಾಡುವುದನ್ನು ವೃದ್ಧೆ ವಿರೋಧಿಸಿದ್ದಳು.

ಮೃತಳ ಮಗ ಅಜಯ್ ಬರ್ಮನ್ ತನ್ನ ತಾಯಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದಾಗ ತನಿಖೆ ನಡೆದು, ವಿಷಯ ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರಿಗೆ ಗಾಯದ ಗುರುತುಗಳಿದ್ದ ಮೃತದೇಹ ಪತ್ತೆಯಾಯಿತು.

ಪೊಲೀಸರು ಸೊಸೆಯನ್ನು ವಿಚಾರಣೆಗೊಳಪಡಿಸಿದಾಗ, ಆಕೆ ಆರಂಭದಲ್ಲಿ ತನಿಖೆಯ ದಾರಿತಪ್ಪಿಸಲು ಪ್ರಯತ್ನಿಸಿದಳು. ಆದರೆ ವಿಚಾರಣೆ ತೀವ್ರವಾಗಿಸಿದಾಗ ಅವಳು ತನ್ನ ಅತ್ತೆಯನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಸೊಸೆ ಮೊಬೈಲ್ ಫೋನ್ ಬಳಸುತ್ತಿರುವ ಬಗ್ಗೆ ಅತ್ತೆ, ತನ್ನ ಮಗನಿಗೆ ಪದೇ ಪದೇ ದೂರು ನೀಡುತ್ತಿದ್ದಳು. ಕೆಲ ದಿನಗಳ ಹಿಂದೆ ರಾತ್ರಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಅತ್ತೆ ಮತ್ತೆ ಮಗನಿಗೆ ದೂರು ನೀಡಿದ್ದು, ಬಳಿಕ ಆಕೆಯಿಂದ ಫೋನ್ ಕಿತ್ತುಕೊಳ್ಳಲಾಗಿತ್ತು.

ಇದರಿಂದ ಕುಪಿತಗೊಂಡ ಆಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ತೆಯ ತಲೆಯನ್ನು ಒಡೆದಿದ್ದಾಳೆ. ಅತ್ತೆ ಸ್ಥಳದಲ್ಲೇ ಸಾವನ್ನಪ್ಪಿದ್ದು ನಂತರ ಆಕೆ ತನ್ನ ಮೇಲೆ ಅನುಮಾನ ಬಾರದಂತೆ ಕಥೆಯೊಂದನ್ನು ಹೆಣೆದಿದ್ದಳು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...