alex Certify ಒಬ್ಬ ಮಹಿಳೆಗೆ ಇಬ್ಬರು ಗಂಡಂದಿರು, ಇಬ್ಬರು ಪ್ರೇಮಿಗಳು….! ಎಲ್ಲರೂ ಒಟ್ಟಿಗೆ ಬಂದಾಗ ನಡೆದಿದ್ದೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಬ್ಬ ಮಹಿಳೆಗೆ ಇಬ್ಬರು ಗಂಡಂದಿರು, ಇಬ್ಬರು ಪ್ರೇಮಿಗಳು….! ಎಲ್ಲರೂ ಒಟ್ಟಿಗೆ ಬಂದಾಗ ನಡೆದಿದ್ದೇನು….?

ಜೈಪುರದ ಮುಹನಾದಲ್ಲಿ ಪ್ರೇಮ ಪ್ರಕರಣದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.

ಮುಹನಾ ಪ್ರದೇಶದಲ್ಲಿ ಮಹಿಳೆ ಹಾಗೂ ಪುರುಷ ಗಂಭೀರ ಸ್ಥಿತಿಯಲ್ಲಿದ್ದಾರೆಂಬ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದರಂತೆ. ಮೋಹನಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಹಿಳೆ ಬಸಂತಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸಂತಿ, ಮೊದಲ ಪತಿಗೆ ವಿಚ್ಛೇದನ ನೀಡಿ ಕನ್ಹಯ್ಯಾ ಎಂಬಾತನನ್ನು ಮದುವೆಯಾಗಿದ್ದಳು. ಮಾಜಿ ಗಂಡನ ಮನೆ ಪಕ್ಕದಲ್ಲಿಯೇ ವಾಸ ಶುರು ಮಾಡಿದ್ದಳು. ಎರಡನೇ ಮದುವೆಯಾದ ಬಸಂತಿಗೆ ಇನ್ನೆರಡು ಪ್ರೇಮಿಗಳಿದ್ದರು. ನಿನ್ನೆ ಇಬ್ಬರು ಪ್ರೇಮಿಗಳು ಬಸಂತಿ ಭೇಟಿಗೆ ಬಂದಿದ್ದಾರೆ. ಬಸಂತಿ ಪತಿ ಕನ್ಹಯ್ಯ ಕೂಡ ಪ್ರಿಯತಮೆ ಹೊಂದಿದ್ದು, ಆತನೂ ಅಲ್ಲಿಗೆ ಬಂದಿದ್ದಾನೆ. ಎಲ್ಲರೂ ಕುಡಿದ ಮತ್ತಿನಲ್ಲಿದ್ದ ಕಾರಣ ಗಲಾಟೆ ಜೋರಾಗಿದೆ. ಮೋಹನಯ್ಯ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ. ಬಸಂತಿಗೆ ಎರಡು ಮದುವೆ, ಎರಡು ಪ್ರೇಮಿಗಳಿಂದ ಒಟ್ಟೂ 6 ಮಕ್ಕಳಿವೆ. 2 ವರ್ಷದ ಮಗಳು ಸ್ಥಳದಲ್ಲಿ ಸಿಕ್ಕಿದ್ದು, ಆಕೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಬಸಂತಿ ಪತಿ ಕನ್ಹಯ್ಯ ಹಾಗೂ ಆತನ ಪ್ರೇಮಿಯನ್ನು ಬಂಧಿಸಲಾಗಿದೆ. ಬಸಂತಿ ಇನ್ನೊಬ್ಬ ಪ್ರೇಮಿ ತಪ್ಪಿಸಿಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...