alex Certify ಅಬ್ಬಬ್ಬಾ….! ಒಂದಲ್ಲ, ಎರಡಲ್ಲ….. ಬರೋಬ್ಬರಿ ಏಳು ಮಕ್ಕಳ ಹೆತ್ತ ಮಹಾತಾಯಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ….! ಒಂದಲ್ಲ, ಎರಡಲ್ಲ….. ಬರೋಬ್ಬರಿ ಏಳು ಮಕ್ಕಳ ಹೆತ್ತ ಮಹಾತಾಯಿ….!

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮಹಿಳೆಯೊಬ್ಬರು ಏಕಕಾಲದಲ್ಲಿ ಏಳು ಮಕ್ಕಳಿಗೆ ಜನ್ಮ ನೀಡಿದ್ದು, ವೈದ್ಯರು ದಿಗ್ಭ್ರಾಂತರಾಗಿದ್ದಾರೆ.

ಅಲ್ಟ್ರಾಸೌಂಡ್ ಮತ್ತು ಇತರ ವರದಿಗಳು ಮಹಿಳೆಯ ಗರ್ಭದಲ್ಲಿ ಐದು ಮಕ್ಕಳು ಇರುವುದನ್ನು ತೋರಿಸಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಹೆರಿಗೆ ಮಾಡಿದಾಗ ಮಹಿಳೆ ಏಳು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಎಲ್ಲಾ ನವಜಾತ ಶಿಶುಗಳು ಮತ್ತು ತಾಯಿ ಆರೋಗ್ಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಬೋಟಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಯಾರ್ ಮೊಹಮ್ಮದ್ ಎಂಬಾತನ ಪತ್ನಿಯನ್ನು ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಆಕೆ ಒಂದೇ ಸಮಯದಲ್ಲಿ 7 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮಕ್ಕಳು ಜನಿಸಿವೆ.

ಮಾಧ್ಯಮ ವರದಿಗಳ ಪ್ರಕಾರ, ಯಾರ್ ಮೊಹಮ್ಮದ್ ಅವರು ಈ ಮಕ್ಕಳನ್ನು ಒಂದು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿರುವುದರಿಂದ ಅವರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಮತ್ತು ಎಲ್ಲಾ ಕುಟುಂಬದ ಸದಸ್ಯರಿಂದ ಸಹಾಯ ಮಾಡಲಾಗುವುದು ಎಂದು ಹೇಳುತ್ತಾರೆ. ಈ 7 ಮಕ್ಕಳ ಮೊದಲು, ಯಾರ್ ಮೊಹಮ್ಮದ್ ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಅಂದರೆ, ಈಗ ಅವರ ಕುಟುಂಬದಲ್ಲಿ 9 ಮಕ್ಕಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...