alex Certify ದಿನಾ ಓಡಾಡುವ ಬಸ್​ ರೂಟ್ ಹಚ್ಚೆ ಹಾಕಿಸಿಕೊಂಡು ಪ್ರೀತಿ ಮೆರೆದ ಯುವತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಾ ಓಡಾಡುವ ಬಸ್​ ರೂಟ್ ಹಚ್ಚೆ ಹಾಕಿಸಿಕೊಂಡು ಪ್ರೀತಿ ಮೆರೆದ ಯುವತಿ….!

ಎಲಿಯಟ್ ಕೊಲ್ವಿನ್ ಎಂಬ 25 ವರ್ಷದ ಯುವತಿ, ಬಸ್‌ಗಳ ಬಗ್ಗೆ ತುಂಬಾ ಗೀಳನ್ನು ಹೊಂದಿದ್ದಾಳೆ. ಅದು ಎಷ್ಟರಮಟ್ಟಿಗೆ ಎಂದರೆ ಈಕೆ ಬಸ್​ ರೂಟನ್ನೇ ತನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾಳೆ. ತನ್ನ ತೋಳಿನ ಮೇಲೆ ಈ ಹಚ್ಚೆ ಹಾಕಿಸಿಕೊಂಡಿರುವ ಎಲಿಯಟ್​, ಬಸ್‌ಗಳ ಮೇಲಿನ ಪ್ರೀತಿಯನ್ನು ಜಗತ್ತಿಗೆ ತೋರಿಸಲು ಬಯಸಿದ್ದಾಳೆ. ಈ ಟ್ಯಾಟೂದಲ್ಲಿ ಆಕೆ ಬಸ್ ಮಾರ್ಗ ಮತ್ತು ಅದರ ಮೇಲೆ ಚಲಿಸುವ ಬಸ್​ಗಳ ಕುರಿತು ತಿಳಿಸಿದ್ದಾಳೆ.

ಇದು ವಿಚಿತ್ರವೆನಿಸಬಹುದು, ಆದರೆ ಎಲಿಯಟ್ ತನ್ನ ತೋಳಿನ ಮೇಲೆ ಮ್ಯಾಂಚೆಸ್ಟರ್‌ನಿಂದ ಸ್ಟಾಕ್‌ಪೋರ್ಟ್‌ಗೆ ಬಸ್ ಮಾರ್ಗ ಸಂಖ್ಯೆಯನ್ನು ಹಚ್ಚೆ ಹಾಕಿಸಿಕೊಂಡಿದ್ದಾಳೆ. ಅವಳು ಪ್ರತಿದಿನ ಈ ಮಾರ್ಗದಲ್ಲಿ ಬಸ್ ಮೇಲೆ ಸಂಚರಿಸುತ್ತಾಳೆ. ಇದರ ಸಂಬಂಧವನ್ನು ಸ್ಮರಿಸಲು ತಾನು ಬಸ್​ ರೂಟ್​ನ ಹಚ್ಚೆ ಹಾಕಿಸಿಕೊಂಡಿರುವುದಾಗಿ ಹೇಳಿದ್ದಾಳೆ.

ಇಷ್ಟೇ ಅಲ್ಲದೇ ಈ ಮಾರ್ಗದಲ್ಲಿ ಇನ್ನೊಂದು ವಿಶೇಷತೆಯೂ ಇದೆಯಂತೆ. ಅದೇನೆಂದರೆ, ಅವಳು ತನ್ನ ಪಾರ್ಟನರ್​ ವಿಲ್ ಸ್ಯಾಂಡರ್ಸ್ ಅನ್ನು ಭೇಟಿಯಾದದ್ದು ಇದೇ ರೂಟ್​ನಲ್ಲಿಯಂತೆ. ಇಬ್ಬರೂ 5 ವರ್ಷಗಳಿಂದ ಒಟ್ಟಿಗೆ ಇದ್ದಾರೆ ಮತ್ತು ಈ ಬಸ್ ಮಾರ್ಗದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಾರೆ. ಈಕೆಯ ಈ ಹುಚ್ಚಿಗೆ ಥರಹೇವಾರಿ ಕಮೆಂಟ್​ಗಳು ಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...