alex Certify ಮೂಗಿನಲ್ಲಿ ಮೂಳೆ ಇದೆಯೋ, ಇಲ್ಲವೋ ಎನ್ನುವ ರೀತಿ ಚಪ್ಪಟೆ ಮಾಡಿಕೊಂಡ ಯುವತಿ….! ಅಚ್ಚರಿಯ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂಗಿನಲ್ಲಿ ಮೂಳೆ ಇದೆಯೋ, ಇಲ್ಲವೋ ಎನ್ನುವ ರೀತಿ ಚಪ್ಪಟೆ ಮಾಡಿಕೊಂಡ ಯುವತಿ….! ಅಚ್ಚರಿಯ ವಿಡಿಯೋ ವೈರಲ್​

ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಕಲೆ ಅಡಕವಾಗಿರುತ್ತದೆ. ಏನೂ ಇಲ್ಲದೆಯೂ ತಮ್ಮ ಅಂಗಾಂಗಗಳ ಮೂಲಕವೇ ಕಲೆಯನ್ನು ಬಹಿರಂಗಪಡಿಸುವವರು ಇದ್ದಾರೆ. ಅಂಥದ್ದೇ ಒಂದು ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.

ಬೆನ್ನಿನಲ್ಲಿ ಮೂಳೆ ಇದೆಯೋ ಇಲ್ಲವೋ ಎಂಬ ಶಂಕೆ ಹುಟ್ಟಿಸುವಷ್ಟು ರೀತಿಯಲ್ಲಿ ಹಲವರು ಯೋಗ, ವ್ಯಾಯಾಮ ಮಾಡುವುದನ್ನು ಕಾಣಬಹುದು. ಅಷ್ಟು ರೀತಿಯಲ್ಲಿ ಬೆನ್ನನ್ನು ಅವರು ಪಳಗಿಸಿರುವುದನ್ನು ನೋಡಬಹುದು. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ.

ಆದರೆ ಇದರಲ್ಲಿ ಯುವತಿ ತನ್ನ ಮೂಗಿಗೆ ಮೂಳೆ ಇದೆಯೋ, ಇಲ್ಲವೋ ಎನ್ನುವ ರೀತಿಯಲ್ಲಿ ಅದನ್ನು ಪಳಗಿಸಿ ಮಾತನಾಡುವುದನ್ನು ಇದರಲ್ಲಿ ಕಾಣಬಹುದು. ರೊಮಾನಾ ಬ್ರುಂಟ್ಜೆಸ್ ಎಂಬ ಯುವತಿ ಈ ವಿಡಿಯೋ ಅನ್ನು ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾಳೆ.

ಯುವತಿ, ತನ್ನ ತೋರು ಬೆರಳಿನಿಂದ ಮೂಗು ಒತ್ತಿದ ವೀಡಿಯೊವನ್ನು ಹಂಚಿಕೊಂಡಿದ್ದಾಳೆ. ಮೂಳೆ ರಹಿತವಾಗಿರುವಂತೆ ಈಕೆ ತನ್ನ ಮೂಗನ್ನು ಚಪ್ಪಟೆ ಮಾಡಿಕೊಂಡು ಅದರಿಂದ ಮಾತನಾಡಿದ್ದಾಳೆ. ಈ ವಿಡಿಯೋ ನೋಡಿದ ಕೆಲ ಬಳಕೆದಾರರು ಬೆಚ್ಚಿ ಬಿದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...