ನೀವು ಬಹುವಾಗಿ ಮೆಚ್ಚಿಕೊಳ್ಳುವ ವಸ್ತುವೊಂದು ಕಳೆದುಹೋಗಿ ಅನಿರೀಕ್ಷಿತವಾಗಿ ಅದು ನಿಮಗೆ ಸಿಕ್ಕ ಅನುಭವವೇನಾದರು ನಿಮಗೆ ಎಂದಾದರೂ ಆಗಿದೆಯೇ? ಅಮೆರಿಕದ ಮಿಷಿಗನ್‌ನ ಮಹಿಳೆಯೊಬ್ಬರಿಗ ಇಂಥದ್ದೇ ಅನುಭವವಾಗಿದೆ.
ಮೇರಿ ಗಝಲ್-ಬಿಯರ್ಡ್‌ಸ್ಲೀ ಹೆಸರಿನ ಈ ಮಹಿಳೆ 1975ರಲ್ಲಿ ಕಳೆದುಕೊಂಡಿದ್ದ ಉಂಗುರವೊಂದನ್ನು ಇದೀಗ ಮರಳಿ ಪಡೆದಿದ್ದಾರೆ…! ಉಂಗುರವನ್ನು ಪಡೆಯುವ ಎಲ್ಲಾ ಆಸೆ ಕೈಬಿಟ್ಟಿದ್ದ ಮೇರಿಗೆ ಕ್ರಿಸ್ ನಾರ್ಡ್ ಎಂಬ ನೆಟ್ಟಿಗರೊಬ್ಬರು ಅಚ್ಚರಿಯ ಸಂತಸ ನೀಡಿದ್ದಾರೆ.
ಫೇಸ್ಬುಕ್ ಮುಖಾಂತರ ಮೇರಿಗೆ ಮೆಸೇಜ್ ಮಾಡಿದ ಕ್ರಿಸ್, ಆಕೆಗೊಂದು ಅಚ್ಚರಿ ತಮ್ಮಲ್ಲಿ ಕಾದಿದೆ ಎಂದಿದ್ದಾರೆ. ಆ ’ಅಚ್ಚರಿ’ಯು 46 ವರ್ಷಗಳ ಹಿಂದೆ ಕಳೆದುಹೋಗಿದ್ದ ತಮ್ಮದೇ ಉಂಗುರ ಎಂದು ಅರಿತಾಗ ತಮ್ಮನ್ನೇ ತಾವು ನಂಬಲಾಗದಷ್ಟು ಆಶ್ಚರ್ಯಗೊಂಡಿದ್ದರು ಮೇರಿ. ಅವಕಾಶಗಳು ನಿಮ್ಮನ್ನು ಹುಡುಕಿ ಬರೋದಿದ್ದರೆ ಬಂದೇ ಬರುತ್ತವೆ ಎಂಬುದಕ್ಕೆ ಈ ಘಟನೆಯೇ ತಾಜಾ ನಿದರ್ಶನ.
ಪಾಪ್ ಮ್ಯೂಸಿಕ್ ವಿರುದ್ದ ಮುನಿಸಿಕೊಂಡ ಉ. ಕೊರಿಯಾ ಸರ್ವಾಧಿಕಾರಿ
ಕ್ರಿಸ್‌ರ ಮೆಸೇಜ್ ಅನ್ನು ಸ್ವೀಕರಿಸಿದಾಗ ಮೊದಲಿಗೆ ಅದೊಂದು ಸ್ಪಾಮ್ ಸಂದೇಶ ಇರಬಹುದೆಂದುಕೊಂಡ ಮೇರಿ, ಬಹಳ ಹುಶಾರಾಗಿಯೇ ಅದನ್ನು ತೆರೆದು ನೋಡಿದ್ದಾರೆ. ಮೇಲ್ಕಂಡ ಉಂಗುರದ ಚಿತ್ರವನ್ನು ಕ್ರಿಸ್ ಮೆಸೇಜ್ ಮೂಲಕ ಶೇರ್ ಮಾಡಿಕೊಂಡಿದ್ದನ್ನು ಕಂಡ ಮೇರಿಗೆ ಬಹಳ ಅಚ್ಚರಿಮಿಶ್ರಿತ ಸಂತಸ ಕಾದಿತ್ತು.
ಉಂಗುರದ ಮಾಲೀಕರನ್ನು ಕಳೆದ 20 ವರ್ಷಗಳಿಂದ ಹುಡುಕುತ್ತಿದ್ದ ಕ್ರಿಸ್, ಈ ಸಂಬಂಧ ತಮ್ಮ ಪೋಸ್ಟ್ ಅನ್ನು ಬಹಳ ಮಂದಿಯೊಂದಿಗೆ ಶೇರ್ ಮಾಡಿಕೊಂಡಿದ್ದರು.
ದ್ವಿಚಕ್ರವಾಹನ ಖರೀದಿದಾರರಿಗೆ ಗುಡ್ ನ್ಯೂಸ್: ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ವಾಹನ ನೀಡಲು ಸಬ್ಸಿಡಿ ಹೆಚ್ಚಳ
20 ವರ್ಷಗಳ ಹಿಂದೆ ಕಸದಬುಟ್ಟಿಯೊಂದರಲ್ಲಿ ಕ್ರಿಸ್‌ರ ಸಹೋದರನಿಗೆ ಈ ಉಂಗುರ ಸಿಕ್ಕಿದೆ. ಅಂದಿನಿಂದ ಅದರ ಮಾಲೀಕರನ್ನು ಹುಡುಕುತ್ತಿರುವ ಕ್ರಿಸ್ ಸಾಮಾಜಿಕ ಜಾಲತಾಣದ ಮೂಲಕ ಅದರ ಮಾಲೀಕರನ್ನು ಹುಡುಕುವ ಕೆಲಸ ಮಾಡುತ್ತಿದ್ದರು.
ಹೀಗೆ ತಮ್ಮ ಪೋಸ್ಟ್ ಅನ್ನು ಒಮ್ಮೆ ಮೇರಿ ಓದುತ್ತಿದ್ದ ಪವರ್ಸ್ ಕ್ಯಾಥೋಲಿಕ್ ಶಾಲೆ ಶೇರ್ ಮಾಡಿದಾಗ, ಸಂದೇಶವು ಮೇರಿಗೆ ತಲುಪಿದೆ. 46 ವರ್ಷಗಳ ಬಳಿಕ ತಮ್ಮ ಮೆಚ್ಚಿನ ವಸ್ತುವೊಂದನ್ನು ಪಡೆದ ಮೇರಿ ಬಹಳ ಸಂತಸಗೊಂಡು, ತಮ್ಮ ಪ್ರೌಢಶಾಲೆ ಹಾಗೂ ಉಂಗುರವನ್ನು ತಮಗೆ ತಲುಪಿಸಲು ಯತ್ನಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.
https://www.facebook.com/luke.m.powers/posts/4018493041521470