alex Certify ಪಾಪ್ ಮ್ಯೂಸಿಕ್ ವಿರುದ್ದ ಮುನಿಸಿಕೊಂಡ ಉ. ಕೊರಿಯಾ ಸರ್ವಾಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಪ್ ಮ್ಯೂಸಿಕ್ ವಿರುದ್ದ ಮುನಿಸಿಕೊಂಡ ಉ. ಕೊರಿಯಾ ಸರ್ವಾಧಿಕಾರಿ

North Korea's Kim Jong Un Wants to Ban K-Pop Music, Calls it 'Vicious Cancer '

ಕೊರಿಯನ್ ಪಾಪ್‌ ಮ್ಯೂಸಿಕ್ ಅಥವಾ ಕೆ-ಪಾಪ್‌‌ ಬ್ಯಾಂಡ್‌ ಅನ್ನು ’ವಿಷಯುಕ್ತ ಕ್ಯಾನ್ಸರ್‌’ ಎಂದು ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್ ಉನ್‌ ಕರೆದಿದ್ದು, ಇದರಿಂದಾಗಿ ತಮ್ಮ ದೇಶದ ಯುವಕರು ಹಾಗೂ ಸಂಸ್ಕೃತಿ ಹಾಳಾಗುತ್ತಿದೆ ಎಂದಿದ್ದಾರೆ.

ಬಂಡವಾಳಶಾಹಿ ಜೀವನಶೈಲಿಗಳು ತಮ್ಮ ದೇಶದಲ್ಲಿ ಆರಂಭಗೊಂಡು ಯುವಕರ ಮೇಲೆ ಪಾಶ್ಚಾತ್ಯ ಪ್ರಭಾವಗಳು ಆವರಿಸುತ್ತಿವೆ ಎಂದ ಜಾಂಗ್, ಈ ಮ್ಯೂಸಿಕ್‌ನಿಂದ ತಮ್ಮ ದೇಶದ ಯುವಕರ ಜೀವನಶೈಲಿ, ಕೇಶವಿನ್ಯಾಸ, ವರ್ತನೆ ಹಾಗೂ ಮಾತುಗಳ ಧಾಟಿಯೇ ಬದಲಾಗುತ್ತಿದೆ ಎಂದಿದ್ದಾರೆ.

ಆದರೆ ಕೆ-ಪಾಪ್ ಮೇಲೆ ಜಾಂಗ್‌ ಸಿಟ್ಟಿಗೆ ಬೇರೆಯದೇ ಕಾರಣವಿದೆ ಎನ್ನಲಾಗಿದೆ.

ಟ್ರಾಫಿಕ್ ​ನಲ್ಲಿ ಸಿಲುಕಿಕೊಂಡಾಗ ಟೈಮ್​ಪಾಸ್​ ಮಾಡೋಕೆ ಒಳ್ಳೆ ಐಡಿಯಾ ಕೊಟ್ರು ಫಾಲ್ಗುಣಿ ಪಾಠಕ್​..!

ಉತ್ತರ ಕೊರಿಯಾದ ವೈರಿ ದೇಶ ದಕ್ಷಿಣ ಕೊರಿಯಾದ ಮ್ಯೂಸಿಕ್  ಅನ್ನು ಬಹಳ ದ್ವೇಷಿಸುವ ಜಾಂಗ್, ಕೆ-ಬ್ಯಾಂಡ್‌ನ ಕಲಾವಿದರ ಜೀವನಶೈಲಿಯಿಂದ ತನ್ನ ದೇಶದ ಜನತೆ ಹಾಳಾಗುತ್ತಿದ್ದಾರೆ ಎಂಬುದು ಇವರ ಅಂಬೋಣ.

ಪದವಿ ಪ್ರದಾನ ಸಮಾರಂಭಕ್ಕೆ ಮಲ ವಿಸರ್ಜನೆ ಮಾಡುತ್ತಾ ಫೋಟೋ ಕಳುಹಿಸಿದ ವಿದ್ಯಾರ್ಥಿನಿ..!

ದಕ್ಷಿಣ ಕೊರಿಯಾದ ಪಾಪ್‌ ಸಂಸ್ಕೃತಿ ತನ್ನ ನೆಲದಲ್ಲಿ ಪಸರದಂತೆ ಮಾಡುವ ಉದ್ದೇಶದಿಂದ ಕ್ರಾಕ್‌ಡೌನ್ ಆರಂಭಿಸಿರುವ ಜಾಂಗ್, ಕೆ-ಪಾಪ್‌ನ ಶೋಗಳು ಹಾಗೂ ವಿಡಿಯೋಗಳನ್ನು ನಿಷೇಧಿಸಲು ಮುಂದಾಗಿದ್ದಾರೆ. ಸ್ಪೈಕ್ ಹಾಗೂ ಮುಲ್ಲೆಟ್‌ನಂಥ ಹೇರ್‌ಸ್ಟೈಲ್‌ಗಳನ್ನು ಸಮಾಜ ವಿರೋಧಿ ಎಂದು ಬಣ್ಣಿಸಲಾಗಿದ್ದು ಅನುಮತಿ ನೀಡಲಾಗಿರುವ 215 ರೀತಿಯ ಹೇರ್‌ಸ್ಟೈಲ್‌ಗಳಲ್ಲಿ ಒಂದನ್ನು ಮಾತ್ರವೇ ಅಲ್ಲಿನ ಜನರು ಮಾಡಬಹುದಾಗಿದೆ.

ಇದೇ ವೇಳೆ ಹರಿದ ಜೀನ್ಸ್‌ಗಳು, ಟೀ-ಶರ್ಟ್‌ಗಳು, ಸ್ಪೋರ್ಟಿಂಗ್ ಸ್ಲೋಗನ್‌ಗಳು, ತುಟಿ ಸೀಳಿಸಿಕೊಳ್ಳುವುದನ್ನು ಬ್ಯಾನ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...