alex Certify ಮರದ ದಿಮ್ಮಿ ಮೇಲೆ ಯೋಗ ಮಾಡಲು ಹೋಗಿ ಹಳ್ಳದಲ್ಲಿ ಬಿದ್ದ ಯುವತಿ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರದ ದಿಮ್ಮಿ ಮೇಲೆ ಯೋಗ ಮಾಡಲು ಹೋಗಿ ಹಳ್ಳದಲ್ಲಿ ಬಿದ್ದ ಯುವತಿ: ವಿಡಿಯೋ ವೈರಲ್​

ಕೆಲವೊಮ್ಮೆ ಹೆಚ್ಚೆಚ್ಚು ಲೈಕ್ಸ್​ ಪಡೆಯಲು ಮಾಡಬಾರದ ಎಡವಟ್ಟನ್ನೆಲ್ಲಾ ಮಾಡಿ ಫಜೀತಿಗೆ ಸಿಲುಕುತ್ತಾರೆ. ನಂತರ ಫಜೀತಿ ಪಟ್ಟ ವಿಡಿಯೋಗಳೇ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ.

ಹೊಳೆಯ ಮೇಲಿದ್ದ ಮರದ ದಿಮ್ಮಿಯ ಮೇಲೆ ಯುವತಿಯೊಬ್ಬರು ಯೋಗಾಸನ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋ ಇದಾಗಿದೆ.

ಈ ಮೂಲಕ ಸಾಕಷ್ಟು ಹೆಸರು ಮಾಡಲು ನೋಡಿದ್ದಳು ಯುವತಿ. ಆದರೆ ಆದದ್ದೇ ಬೇರೆ. ಬೇರೆ ಬೇರೆ ರೀತಿಯ ಭಂಗಿಯನ್ನು ಪ್ರಯತ್ನಿಸುವಾಗ ಕೆಳಗೆ ಹರಿಯುತ್ತಿರುವ ಹೊಳೆಯೊಳಗೆ ಬಿದ್ದು ಹೋಗಿದ್ದಾಳೆ.

ಈ ವಿಡಿಯೋವನ್ನು ಮೂಲತಃ 2017 ರಲ್ಲಿ ಚಿಸಾ ಮೇರಿ ಅವರು ಪೋಸ್ಟ್ ಮಾಡಿದ್ದಾರೆ. ಇದು ಈಗ ಮತ್ತೊಮ್ಮೆ ವೈರಲ್​ ಆಗಿದೆ. ಇದು ಖುದ್ದು ಅವರದ್ದೇ ವಿಡಿಯೋ ಆಗಿದೆ.

ತಾವು ಏನೋ ಮಾಡಲು ಹೋಗಿ ಏನೋ ಆಗಿದ್ದನ್ನು ಅವರು ತಿಳಿಸಿದ್ದಾರೆ. ಯೋಗದ ಭಂಗಿಯಲ್ಲಿ ತಿರುಗಲು ಹೋದಾಗ ಆಯತಪ್ಪಿ ಕೆಳಕ್ಕೆ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು.ಇದನ್ನು ನೋಡಿ ನೆಟ್ಟಿಗರು ಬೇಕಿತ್ತಾ ಇದೆಲ್ಲಾ ಎನ್ನುತ್ತಿದ್ದಾರೆ.

— Wtf Scene (@wtf_scene) February 24, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...