alex Certify ನನ್‌ ವೇಷ ಧರಿಸಿ ಸ್ಮಶಾನದಲ್ಲಿ ಅಸ್ಥಿಪಂಜರದ ಜೊತೆ ನೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನ್‌ ವೇಷ ಧರಿಸಿ ಸ್ಮಶಾನದಲ್ಲಿ ಅಸ್ಥಿಪಂಜರದ ಜೊತೆ ನೃತ್ಯ

ನನ್ ಉಡುಪನ್ನು ಧರಿಸಿದ್ದ ಮಹಿಳೆಯೊಬ್ಬರು ಇಂಗ್ಲೆಂಡಿನ ಸ್ಮಶಾನವೊಂದರಲ್ಲಿ ಅಸ್ಥಿಪಂಜರದ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್​ ಆಗಿದ್ದಾರೆ. ಸ್ಮಶಾನದ ಹೊರಗಿನ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಸೆಪ್ಟೆಂಬರ್​ 11ರಂದು ನಡೆದಿದೆ.

ನನ್‌ ರಂತೆ ಕಾಣುತ್ತಿರುವ ಮಹಿಳೆ ಮನುಷ್ಯನ ಅಸ್ಥಿಪಂಜರವನ್ನು ಹಿಡಿದು ನೃತ್ಯ ಮಾಡುತ್ತಿರೋದನ್ನು ಕಾಣಬಹುದಾಗಿದೆ. ಮತ್ತೊಂದು ಫೋಟೋದಲ್ಲಿ ಆಕೆ ನಾಯಿ ರೀತಿ ಕಾಣುತ್ತಿರುವ ಪ್ರಾಣಿಯೊಂದರ ಜೊತೆ ಆಟವಾಡ್ತಿರೋದನ್ನೂ ಕಾಣಬಹುದಾಗಿದೆ.

ಅನೇಕರು ಈ ದೃಶ್ಯವನ್ನು ನೋಡುತ್ತಿದ್ದರೂ ಸಹ ಅದರ ಬಗ್ಗೆ ಪರಿವೆಯೇ ಇಲ್ಲದಂತಿದ್ದ ನನ್ ತನ್ನ ಪಾಡಿಗೆ ತಾನು ಅಸ್ಥಿ ಪಂಜರದ ಜೊತೆ ಕಾಲ ಕಳೆದಿದ್ದಾಳೆ. ಅನೇಕರು ಇದೇನಿದು ವಿಚಿತ್ರ ಎಂದು ಹೇಳುತ್ತಿದ್ದರೆ ಇನ್ನೂ ಕೆಲವರು ಇದು ಪೂರ್ವನಿಯೋಜಿತ ವಿಡಿಯೋ ಎಂದಿದ್ದಾರೆ.

— 9GAG ❤️ Memeland (@9GAG) September 14, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...