alex Certify ಮೆಕ್​ ಡೊನಾಲ್ಡ್ ನಲ್ಲಿಯೇ ಮಗು ಹೆತ್ತ ಮಹಿಳೆ: ಲಿಟ್ಲ್​ ನಗ್ಗೆಟ್​ ಎಂದು ನಾಮಕರಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಕ್​ ಡೊನಾಲ್ಡ್ ನಲ್ಲಿಯೇ ಮಗು ಹೆತ್ತ ಮಹಿಳೆ: ಲಿಟ್ಲ್​ ನಗ್ಗೆಟ್​ ಎಂದು ನಾಮಕರಣ….!

ಆಸ್ಪತ್ರೆಗೆ ಹೋಗುವ ಹಸಿದ ಗರ್ಭಿಣಿಯೊಬ್ಬಳು ಸ್ವಲ್ಪ ವಿರಾಮ ತೆಗೆದುಕೊಳ್ಳಲು ಮೆಕ್​ ಮೆಕ್​ ಡೊನಾಲ್ಡ್ ​ಗೆ ಹೋದ ಸಮಯದಲ್ಲಿ ಅಲ್ಲಿಯೇ ಮಗುವನ್ನು ಹೆತ್ತ ಘಟನೆ ಅಮೆರಿಕದಲ್ಲಿ ನಡೆದಿದೆ. ಅಲೆಂಡ್ರಿಯಾ ವರ್ಥಿ,ಎಂಬ ಮಹಿಳೆ ಹೀಗೆ ಮಗುವನ್ನು ಹೆತ್ತಾಕೆ. ಹೆಣ್ಣು ಮಗುವಿಗೆ ಈಕೆ ಜನ್ಮ ನೀಡಿದ್ದು ಮಗುವಿಗೆ ‘McDonald’s Little Nugget’ ಎಂದು ಅಡ್ಡ ಹೆಸರು ಇಡಲಾಗಿದೆ.

ಅಲೆಂಡ್ರಿಯಾ ವರ್ಥಿ, ಮೆಕ್​ಡಾನಲ್ಸ್​ಗೆ ಹೋದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆ ವಿಷಯವನ್ನು ಸಿಬ್ಬಂದಿಗೆ ತಿಳಿಸಿದ್ದಾಳೆ. ಹೆಚ್ಚಿನ ಸಮಯ ಇಲ್ಲದ ಕಾರಣ ಸಿಬ್ಬಂದಿಯೇ ಹೆರಿಗೆಗೆ ನೆರವಾಗಿದ್ದಾರೆ. ಅಲ್ಲಿ ಹೆಣ್ಣು ಮಗುವಿಗೆ ಆಕೆ ಜನ್ಮ ನೀಡಿದ್ದಾಳೆ.

ವರ್ಥಿ ಶೌಚಾಲಯಕ್ಕೆ ಹೋದಾಗ ಪ್ರಸವದ ಸಮಯ ಹತ್ತಿರ ಬಂದಿದೆ ಎಂದು ತಿಳಿದಿದೆ. ಜೋರಾಗಿ ಕಿರುಚಿಕೊಂಡಿದ್ದಾಳೆ. ಕಿರುಚಿದ ಶಬ್ದ ಕೇಳಿದ ಸಿಬ್ಬಂದಿ ಓಡಿ ಬಂದಿದ್ದಾರೆ. ಅಷ್ಟರಲ್ಲಿಯೇ ಆಕೆ ಅಲ್ಲಿಯೇ ಬಿದ್ದುಕೊಂಡಿದ್ದಳು. ತನಗೆ ಹೆರಿಗೆ ನೋವು ಕಾಣಿಸಿಕೊಂಡಿರುವುದಾಗಿ ಹೇಳಿದ್ದಳು.

ಇದರಿಂದ ಗಾಬರಿಗೊಂಡರೂ ಸಿಬ್ಬಂದಿ ಎಲ್ಲರೂ ಸೇರಿ ಆಕೆಯನ್ನು ಎತ್ತಿಕೊಂಡು ಹಾಸಿಗೆಯ ಮೇಲೆ ಮಲಗಿಸಿ ಹೆರಿಗೆಗೆ ಸಹಾಯ ಮಾಡಿದ್ದಾರೆ. ಸಹಾಯಕ್ಕೆ ವೈದ್ಯರಿಗೆ ಕರೆಯುವ ಮೊದಲೇ ಮಗುವಿನ ಜನ್ಮವಾಗಿದೆ. ಈ ಬಗ್ಗೆ ಪೀಪಲ್ ಮ್ಯಾಗಜೀನ್‌ ಸವಿಸ್ತಾರವಾಗಿ ವರದಿ ಮಾಡಿದ ನಂತರ ಈ ವಿಷಯ ಭಾರಿ ವೈರಲ್ ಆಗಿದೆ. ಮೆಕ್​ಡಾನಲ್ಸ್​ ಆಹಾರ ಮಾತ್ರವಲ್ಲದೇ ಮಗುವನ್ನೂ ನೀಡುತ್ತದೆ ಎಂದು ಹಲವರು ತಮಾಷೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...