alex Certify ಸೈಕಲ್​ ತುಳಿಯುತ್ತಾ ನರ್ತಿಸಿದ ಯುವತಿ: ಸುಂದರ ಡಾನ್ಸ್​ಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕಲ್​ ತುಳಿಯುತ್ತಾ ನರ್ತಿಸಿದ ಯುವತಿ: ಸುಂದರ ಡಾನ್ಸ್​ಗೆ ನೆಟ್ಟಿಗರು ಫಿದಾ

ಈಗಂತೂ ಎಲ್ಲೆಲ್ಲೂ ರೀಲ್ಸ್​ ಹುಚ್ಚು. ಅದರಲ್ಲಿಯೂ ಡಾನ್ಸ್​ ರೀಲ್ಸ್​ಗಳು ಹೆಚ್ಚೆಚ್ಚು ವೈರಲ್​ ಆಗುವ ಕಾರಣ, ಹುಚ್ಚಾಪಟ್ಟೆಯಾಗಿ ನರ್ತಿಸಿ ರೀಲ್ಸ್​ ಮಾಡುವವರೂ ಹೆಚ್ಚಾಗುತ್ತಿದ್ದಾರೆ, ಇಂಥವುಗಳಲ್ಲಿ ಹಲವು ವೈರಲ್​ ಕೂಡ ಆಗುತ್ತವೆ.

ಆದರೆ ಇಲ್ಲೊಂದು ವಿಡಿಯೋದಲ್ಲಿ ಅಪರೂಪದ ಪ್ರತಿಭೆಯನ್ನು ಯುವತಿಯೊಬ್ಬಳು ಪ್ರದರ್ಶಿಸಿದ್ದಾಳೆ. ಬೈಸಿಕಲ್ ಸವಾರಿ ಮಾಡುವಾಗ ಯಾರಾದರೂ ಬಾಲಿವುಡ್ ಟ್ರ್ಯಾಕ್‌ಗೆ ಹಾಡುವುದನ್ನು ಬಹುಶಃ ನೀವು ನೋಡಿರಲಿಕ್ಕಿಲ್ಲ. ಈ ವಿಡಿಯೋದಲ್ಲಿ ನೀವು ಅದನ್ನು ನೋಡಬಹುದು.

ವೈರಲ್ ವಿಡಿಯೋವನ್ನು ಬುಶ್ರಾ ಎಂಬ ಬಳಕೆದಾರರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಸೂತಿ ಮಾಡಿದ ಕುರ್ತಾ ಸೆಟ್‌ನಲ್ಲಿ ಯುವತಿಯೊಬ್ಬರು ನರ್ತಿಸುವುದನ್ನು ನೋಡಬಹುದು.

ಸೈಕಲ್​ ಮೇಲೆಯೇ ಡಾನ್ಸ್​ ಮಾಡುತ್ತಿರುವ ಈ ಯುವತಿ ಸೈಕಲ್​ ಹ್ಯಾಂಡಲ್​ ಹಿಡಿಯದೇ ಪೆಡಲ್​ ಮಾಡುತ್ತಾ ಸುಂದರವಾಗಿ ನರ್ತಿಸಿದ್ದಾರೆ. ಈಕೆಯ ನರ್ತನಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಇದಾಗಲೇ ವಿಡಿಯೋ 5 ಲಕ್ಷಕ್ಕೂ ಹೆಚ್ಚು ವ್ಯೂಸ್​ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...