alex Certify ಮುತ್ತು – ಮಣಿಗಳಿಂದ ತುಂಬಿದ ವಿಂಟೇಜ್​ ಡ್ರೆಸ್​ ಪ್ರದರ್ಶಿಸಿದ ನಟಿ: ನೆಟ್ಟಿಗರ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುತ್ತು – ಮಣಿಗಳಿಂದ ತುಂಬಿದ ವಿಂಟೇಜ್​ ಡ್ರೆಸ್​ ಪ್ರದರ್ಶಿಸಿದ ನಟಿ: ನೆಟ್ಟಿಗರ ಶ್ಲಾಘನೆ

ಸೃಜನಶೀಲತೆಯ ಆಧಾರದ ಮೇಲೆ ಹೊಸ ಟ್ರೆಂಡ್‌ಗಳನ್ನು ಪ್ರಯೋಗಿಸುವುದು ಮತ್ತು ಹಳೆಯ ಶೈಲಿಗಳನ್ನು ಮರುಸೃಷ್ಟಿಸುವುದು ಈಗಿನ ಫ್ಯಾಷನ್ ಆಗಿದೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ.

1970 ರ ದಶಕದ ಉಡುಪನ್ನು ವಿಂಟೇಜ್-ಪ್ರೇರಿತ ಹುಟ್ಟುಹಬ್ಬದ ಉಡುಪಾಗಿ ಪರಿಷ್ಕರಿಸಲು ಯುವತಿಯೊಬ್ಬಳು ಪ್ರಯತ್ನಿಸಿದ್ದು, ಅದು ಆನ್‌ಲೈನ್‌ನಲ್ಲಿ ವೈರಲ್​ ಆಗಿದೆ. ಇದು ಫ್ಯಾಷನ್ ಜಗತ್ತಿನಲ್ಲಿ ವಿವಿಧ ದೃಷ್ಟಿಕೋನಗಳನ್ನು ಎತ್ತಿ ತೋರಿಸುವಂತಿದೆ.

ದಿ ಕಸಿನ್ ಎಫೆಕ್ಟ್ – ಬೆಸ್ಟ್ ಮ್ಯಾನ್ ಮತ್ತು ಡ್ಯಾಡಿಸ್ ವಾಲೆಟ್‌ನಂತಹ ಚಲನಚಿತ್ರಗಳಲ್ಲಿ ನಟಿಸಿದ ನಟ ಕೆಲ್ಲಿ ಹೇಯರ್ ಈ ಹೊಸ ವಿಂಟೇಜ್​ ಫ್ಯಾಷನ್​ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ವಿಂಟೇಜ್ ನೈಟ್‌ಗೌನ್‌ಗಳನ್ನು ತೊಟ್ಟು ಆಕೆ ಅದನ್ನು ಪ್ರದರ್ಶಿಸಿದ್ದಾರೆ. 60ರ ದಶಕದ ವೇಷಭೂಷಣಗಳಿಂದ ಸ್ಫೂರ್ತಿ ಪಡೆದು ವಿಂಟೇಜ್ ಡ್ರೆಸ್‌ ಧರಿಸಿ ಅವುಗಳ ಮಾಹಿತಿ ನೀಡಿದ್ದಾಳೆ.

ಈ ಡ್ರೆಸ್​ಗಳಲ್ಲಿ ಲೇಸ್, ದಪ್ಪನಾದ ಮಣಿಗಳು ಮತ್ತು ಮುತ್ತುಗಳನ್ನು ಸೇರಿಸಿರುವುದನ್ನು ನೋಡಬಹುದು. ಇದು ಅದ್ಭುತ ಎನ್ನುವಂಥ ಡ್ರೆಸ್​ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ. ಇಂಥ ಸೃಜನಶೀಲ ಕಸೂತಿ ಕೆಲಸವನ್ನು ಆ ಕಾಲದಲ್ಲಿ ಅದೆಷ್ಟು ಸುಂದರವಾಗಿ ಮಾಡುತ್ತಿದ್ದರು ಎಂದು ನೆಟ್ಟಿಗರು ಬಣ್ಣಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...