alex Certify ತನ್ನ ಸಾಲದ ಮಾಹಿತಿ ಕಂಡು ಬೆಚ್ಚಿಬಿದ್ಲು ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಸಾಲದ ಮಾಹಿತಿ ಕಂಡು ಬೆಚ್ಚಿಬಿದ್ಲು ಯುವತಿ…!

ನೈಟ್-ಔಟ್‌ ಒಂದರ ಬಳಿಕ ತನ್ನ ಬ್ಯಾಂಕ್ ಬ್ಯಾಲೆನ್ಸ್‌ ಅನ್ನು ಚೆಕ್ ಮಾಡಿದ ಅಮೆರಿಕದ ಯುವತಿಯೊಬ್ಬರು ಬೆಚ್ಚಿ ಬಿದ್ದಿದ್ದಾರೆ. ತಮ್ಮ ಖಾತೆಯಲ್ಲಿ -$49,999,999,697.98 ಮೊತ್ತ ಇದೆ ಎಂದು ಬ್ಯಾಲೆನ್ಸ್‌ ತೋರಿದಾಗ ಕಣ್ಣುಜ್ಜಿಕೊಂಡು ನೋಡಿದ ಈಕೆಗೆ ತನ್ನ ಮೇಲೆ $50 ಶತಕೋಟಿ ಸಾಲ ಇದೆ ಎಂದು ತಿಳಿದುಬಂದಿದೆ.

BIG NEWS: ಬಳಕೆದಾರ ಸ್ನೇಹಿ ವಿಂಡೋಸ್ 11 ಹೊಸ ಆವೃತ್ತಿ ಬಿಡುಗಡೆ

ಕೂಡಲೇ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದ ಮ್ಯಾಡಿ ಮ್ಯಾಕ್‌ಗಿವರ್ನ್, ವಾರಾಂತ್ಯದಲ್ಲಿ ಬ್ಯಾಂಕಿನ ತಾಂತ್ರಿಕ ದೋಷವೊಂದು ಕಂಡು ಹೀಗೆ ಆಗಿದೆ ಎಂದು ಅರಿತುಕೊಂಡಿದ್ದಾರೆ.

ಲ್ಯಾಪ್ಸ್ ಆಗಿರುವ LIC ಪಾಲಿಸಿಗೆ ಮರುಜೀವ ತುಂಬುವುದು ಹೇಗೆ…? ನಿಮಗಿರಲಿ ಈ ಮಾಹಿತಿ

ಈ ಬಗ್ಗೆ ಸೋಮವಾರ ವಿಡಿಯೋವೊಂದನ್ನು ಅಪ್ಲೊಡ್ ಮಾಡಿದ ಮ್ಯಾಡಿ, “ನಾನು ಲಾಸ್ ಏಂಜಲೀಸ್ ನಗರವನ್ನು ಖರೀದಿ ಮಾಡಿದೆ ಎಂದು ಹೇಳಬೇಕೆನಿಸುತ್ತದೆ. ಇಲ್ಲಿ ಹಾಗೆ ಆಗಿಲ್ಲ. ಬೆಳಗ್ಗಿನ ಜಾವ 2 ಗಂಟೆಗೆ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವಂತೆ ಏಕೆ ಆನಿಸಿತು ಎಂದು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ನನ್ನ ಬಳಿ ಋಣಾತ್ಮಕ $49 ಶತಕೋಟಿ ಇದೆ ಎಂಬುದನ್ನು ಕಂಡ ನನ್ನ ಬ್ಯಾಂಕಿಗೆ ಕರೆ ಮಾಡಿ ವಿಚಾರ ತಿಳಿಸಿದೆ” ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...