alex Certify ಫೋಟೋ ಎಡಿಟ್​ಗೆ ಯುವತಿ ಚಾಲೆಂಜ್​: ನಗು ತರಿಸುತ್ತೆ ಬಳಕೆದಾರರ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋಟೋ ಎಡಿಟ್​ಗೆ ಯುವತಿ ಚಾಲೆಂಜ್​: ನಗು ತರಿಸುತ್ತೆ ಬಳಕೆದಾರರ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣದಲ್ಲಿ ಚಿತ್ರ ವಿಚಿತ್ರ ಎನ್ನಿಸುವ ಘಟನೆಗಳು ಟ್ರೆಂಡ್​ ಆಗಿಬಿಡುತ್ತವೆ. ಸದ್ಯ ಯಾವುದಾದರೂ ಫೋಟೋ ಒಂದನ್ನು ಹಾಕಿ ಅದನ್ನು ಸ್ವಲ್ಪ ಚೇಂಜ್​ ಮಾಡುವಂತೆ ಕೇಳುವ ಟ್ರೆಂಡ್​ ಶುರುವಾಗಿದೆ.

ಹೀಗೆ ತನ್ನ ಫೋಟೋವನ್ನು ಎಡಿಟ್​ ಮಾಡಲು ಯುವತಿಯೊಬ್ಬಳು ಕೇಳಿಕೊಂಡಿದ್ದು, ನೆಟ್ಟಿಗರು ಎಷ್ಟು ಉತ್ಸಾಹದಿಂದ ಬದಲಾವಣೆ ಮಾಡಿದ್ದಾರೆ ಎಂಬುದು ವೈರಲ್​ ಆಗಿದೆ.

ಹರ್ಷಿತಾ ಎಂಬ ಟ್ವಿಟ್ಟರ್ ಬಳಕೆದಾರರು ಈ ರೀತಿ ತಮ್ಮ ಫೋಟೋ ಎಡಿಟ್​ ಮಾಡಲು ಕೇಳಿಕೊಂಡಿದ್ದರು. ಒಬ್ಬರು ಬರಿ ಟವೆಲ್‌ ಧರಿಸಿರುವ ವ್ಯಕ್ತಿಯನ್ನು ಹಾಕಿದ್ದರೆ, ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಚಿತ್ರವನ್ನು ಇನ್ನೊಬ್ಬ ಬಳಕೆದಾರರು ಹಾಕಿದ್ದಾರೆ. ಹೀಗೆ ವಿಚಿತ್ರ ಎನಿಸುವಂತೆ ಫೋಟೋ ಎಡಿಟ್​ ಮಾಡಲಾಗಿದೆ.

ಈ ಹಿಂದೆ ಸನ್ನಿ ಎಂಬಾತ ಹೀಗೆಯೇ ಕೇಳಿಕೊಂಡಿದ್ದಾಗ ಆತನ ಫೋಟೋಗಳನ್ನು ಹೇಗ್ಹೇಗೆ ಬೇಕೋ ಹಾಗೆಲ್ಲಾ ಎಡಿಟ್​ ಮಾಡಿದ್ದರು. ಅಸಹ್ಯ ಎನಿಸುವ ರೀತಿಯಲ್ಲಿಯೂ ಆತನ ಫೋಟೋ ಮಾರ್ಫ್​ ಮಾಡಲಾಗಿತ್ತು.

ಆದರೆ ಸದ್ಯಕ್ಕೆ ಈ ಯುವತಿಯ ವಿಷಯದಲ್ಲಿ ಹಾಗೆ ಆಗಲಿಲ್ಲ. ಕ್ರಿಕೆಟ್​ ತಾರೆಯರು ಸೇರಿದಂತೆ ಕೆಲವು ಸೆಲೆಬ್ರಿಟಿಗಳ ಯುವತಿಯ ಹಿಂದಕ್ಕೆ ಇಟ್ಟು ಎಡಿಟ್​ ಮಾಡಲಾಗಿದೆ. ಬಳಕೆದಾರನೊಬ್ಬ ಈಕೆ ನನ್ನ ಗರ್ಲ್​ಫ್ರೆಂಡ್​ ಎಂದು ಹೇಳಿಕೊಂಡಿದ್ದಾನೆ.

ಈ ರೀತಿಯ ವಿಚಿತ್ರ ಶೋಕಿ ಏಕೆ, ಅಸಹ್ಯ ರೀತಿಯಲ್ಲಿ ಎಡಿಟ್​ ಮಾಡಿದರೆ ನಿಮ್ಮದೇ ಮರ್ಯಾದೆ ಹೋಗುತ್ತದೆಯಲ್ಲವೆ ಎಂದು ಕೆಲವರು ಬುದ್ಧಿಮಾತನ್ನೂ ಹೇಳಿದ್ದಾರೆ. ಈ ಫೋಟೋದಲ್ಲಿನ ವ್ಯಕ್ತಿಯನ್ನು ತೆಗೆಯಿರಿ ಎಂದೂ ಇದೇ ವೇಳೆ ಯುವತಿ ಕೋರಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...