alex Certify ಮತ್ತೊಂದು ವಿಡಿಯೋ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಕಣ್ಸನ್ನೆ ಚೆಲುವೆ ಪ್ರಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ವಿಡಿಯೋ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಕಣ್ಸನ್ನೆ ಚೆಲುವೆ ಪ್ರಿಯಾ

ನಟಿ ಪ್ರಿಯಾ ಪ್ರಕಾಶ್​ ವಾರಿಯರ್​ ತಮ್ಮ ಕಣ್ಸನ್ನೆಯ ವಿಡಿಯೋ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು.

ದಕ್ಷಿಣ ಭಾರತದ ನಟಿಯಾಗಿರುವ ಪ್ರಿಯಾ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. 21 ವರ್ಷದ ನಟಿ ಇನ್​ಸ್ಟಾಗ್ರಾಂನಲ್ಲಿ 7 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ನ್ನು ಹೊಂದಿದ್ದಾರೆ. ಇತ್ತೀಚಿನ ರೀಲ್ಸ್​ ಒಂದರಲ್ಲಿ ನಟಿ ಪ್ರಿಯಾ ಟಚ್​ ಇಟ್​ ಎಂಬ ಹಾಡಿಗೆ ನೃತ್ಯ ಮಾಡಿದ್ದು ಈ ವಿಡಿಯೋ ವೈರಲ್​ ಆಗಿದೆ.

ಇನ್​ಸ್ಟಾಗ್ರಾಂ ರೀಲ್ಸ್​ನಲ್ಲಿ ಈ ಹಾಡು ಹೊಸ ಟ್ರೆಂಡ್​ನ್ನೇ ಕ್ರಿಯೇಟ್​ ಮಾಡಿದೆ. ಶಟ್​ ಅಪ್​ & ಬೆಂಡ್​ ಓವರ್​ ಎಂಬ ಈ ಹಾಡಿಗೆ ಪ್ರಿಯಾ ಸಖತ್​ ಆಗಿ ಹೆಜ್ಜೆ ಹಾಕೋದ್ರ ಜೊತೆಗೆ ಕ್ಯೂಟ್​ ಎಕ್ಸ್​ಪ್ರೆಷನ್​ ಕೂಡ ನೀಡಿದ್ದಾರೆ. ನಟಿ ಗುಲಾಬಿ ಬಣ್ಣದ ಕ್ರಾಪ್​ ಟಾಪ್​ ಹಾಗೂ ಕಪ್ಪು ಬಣ್ಣದ ಪ್ಯಾಂಟ್​ ಧರಿಸಿದ್ದಾರೆ.

‘ಮಿಮಿ’ ಸಿನಿಮಾ ಯಶಸ್ಸನ್ನು ‘ಐಷಾರಾಮಿ’ಯಾಗಿ ಸಂಭ್ರಮಿಸಿದ ನಟಿ ಕೃತಿ ಸನೂನ್​..!

ಈ ವಿಡಿಯೋ 1.4 ಮಿಲಿಯನ್​ಗೂ ಅಧಿಕ ವೀವ್ಸ್​ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ 2 ಲಕ್ಷ ಲೈಕ್ಸ್​ ಹಾಗೂ 1250 ಕಮೆಂಟ್​ಗಳನ್ನೂ ಸಂಪಾದಿಸಿದೆ.

ಪ್ರಿಯಾ ಪ್ರಕಾಶ್​ ವಾರಿಯರ್​ 2018ರಲ್ಲಿ ತಮ್ಮ ಸಿನಿಮಾ ʼಓರು ಅಡಾರ್​ ಲವ್​​ʼನ ಒಂದು ಕಾಮಿಡಿ ರೊಮ್ಯಾನ್ಸ್​ ಕ್ಲಿಪ್​ ಮೂಲಕ ರಾತ್ರೋ ರಾತ್ರಿ ಸ್ಟಾರ್​ ಆಗಿದ್ದರು. ವೈರಲ್​ ವಿಡಿಯೋದಲ್ಲಿ ಸಹಪಾಠಿಯತ್ತ ನೋಡಿ ಪ್ರಿಯಾ ಕಣ್ಣು ಹೊಡೆಯುವ ದೃಶ್ಯ ಇತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...