alex Certify ‘ಮಿಮಿ’ ಸಿನಿಮಾ ಯಶಸ್ಸನ್ನು ‘ಐಷಾರಾಮಿ’ಯಾಗಿ ಸಂಭ್ರಮಿಸಿದ ನಟಿ ಕೃತಿ ಸನೂನ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಿಮಿ’ ಸಿನಿಮಾ ಯಶಸ್ಸನ್ನು ‘ಐಷಾರಾಮಿ’ಯಾಗಿ ಸಂಭ್ರಮಿಸಿದ ನಟಿ ಕೃತಿ ಸನೂನ್​..!

ಮಿಮಿ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬಳಿಕ ಬಾಲಿವುಡ್​ ನಟಿ ಕೃತಿ ಸನೂನ್​​ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ.

ಹೌದು..! ಅರ್ಜುನ್​ ಕಪೂರ್​ ಬಳಿಕ ಇದೀಗ ನಟಿ ಕೃತಿ ಮರ್ಸಿಡೀಸ್​ ಮೇಬ್ಯಾಕ್​ ಜಿಎಲ್​ಎಸ್​ 600 ಕಾರನ್ನು ಖರೀದಿಸಿದ್ದಾರೆ.

ಮಿಮಿ ಸಿನಿಮಾ ಕೃತಿ ಸನೂನ್​​ಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದ್ದು, ಮಾತ್ರವಲ್ಲದೇ ಬಾಲಿವುಡ್​ನಲ್ಲಿ ಕೃತಿಯನ್ನು ಟಾಪ್​ ನಟಿಯರ ಸ್ಥಾನಕ್ಕೇರಿಸಿದೆ. ಹೀಗಾಗಿ ಇದೇ ಖುಷಿಯಲ್ಲಿ ನಟಿ ತಮ್ಮ ಐಷಾರಾಮಿ ಕಾರು ಕೆಲೆಕ್ಷನ್​ಗೆ ಮತ್ತೊಂದು ಕಾರನ್ನು ಸೇರ್ಪಡೆ ಮಾಡಿದ್ದಾರೆ.

ಮಿಮಿ ಸಿನಿಮಾ ಕೃತಿ ಸನೂನ್​ ಜೀವನದಲ್ಲಿ ಸೆಕೆಂಡ್​ ಇನ್ನಿಂಗ್ಸ್​ ಎಂದೇ ಹೇಳಬಹುದು. ಈ ಸಿನಿಮಾವು ಕೃತಿಗೆ ಯಾವ ಸಿನಿಮಾವೂ ತಂದುಕೊಡದ ರೀತಿಯಲ್ಲಿ ಯಶಸ್ಸನ್ನು ತಂದುಕೊಟ್ಟಿದೆ. ಇತ್ತೀಚಿಗೆ ಕೃತಿ ಮ್ಯಡೊಕ್​ ಫಿಲಂ ಆಫೀಸ್​ನಲ್ಲಿ ಪಪ್ಪಾರಜೆ ಕಣ್ಣಿಗೆ ಬಿದ್ದಿದ್ದು ಕ್ಯಾಮರಾಗೆ ಪೋಸ್​ ನೀಡಿದ್ದರು.

ಇನ್ನು ನಟಿ ಕೃತಿ ಸನೂನ್​ ಸದ್ಯ ಆದಿ ಪುರುಷ್​, ಬಚ್ಚನ್​ ಪಾಂಡೆ, ಬೆಡಿಯಾ, ಗಣಪತ್​, ಹಮ್​ ದೋ ಹಮಾರೆ ದೋ ಹಾಗೂ ಇನ್ನೂ ಹೆಸರಿಡದ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...