alex Certify ವಿಶ್ವ ಸುಂದರಿ ಹರ್ನಾಜ್​ ಸಂಧು ಸಾಧನೆಯ ಬಗ್ಗೆ ಕುಟುಂಬಸ್ಥರು ಹೇಳೋದೇನು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಸುಂದರಿ ಹರ್ನಾಜ್​ ಸಂಧು ಸಾಧನೆಯ ಬಗ್ಗೆ ಕುಟುಂಬಸ್ಥರು ಹೇಳೋದೇನು…..?

ನಟಿ – ಮಾಟೆಲ್​ ಹರ್ನಾಜ್​ ಸಂಧು 2021ನೇ ಸಾಲಿನ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಬರೋಬ್ಬರಿ 21 ವರ್ಷಗಳ ಬಳಿಕ ಭಾರತಕ್ಕೆ ಈ ಕಿರೀಟವನ್ನು ತಂದುಕೊಟ್ಟಿದ್ದಾರೆ. ಪುತ್ರಿಯ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಹರ್ನಾಜ್​ ತಾಯಿ ವಿದೇಶದಲ್ಲಿ ತಮ್ಮ ಮಗಳು ಸ್ಪರ್ಧೆಯನ್ನು ಎದುರಿಸುತ್ತಿದ್ದರೆ ತಾವು ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೆವು ಎಂದು ಹೇಳಿದ್ರು.

ಪುತ್ರಿಯ ಬಗ್ಗೆ ಮಾತನಾಡಿದ ಹರ್ನಾಜ್​ ತಾಯಿ ವೈದ್ಯೆ ರವೀಂದರ್​ ಕೌರ್​, ಜೋಳದ ರೊಟ್ಟಿ ಹಾಗೂ ಪಾಲಕ್​ ಸೊಪ್ಪಿನ ಸಾಗು ಅಂದರೆ ಹರ್ನಾಜ್​​ಗೆ ಪಂಚಪ್ರಾಣ. ಆಕೆ ಮನೆಗೆ ಬರುತ್ತಿದ್ದಂತೆಯೇ ನಾನು ಇದೇ ಖಾದ್ಯದ ಮೂಲಕ ಆಕೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ರು.

ಸಂಧು ಸಹೋದರ ಹರ್ನೂರ್​ ಕೂಡ ಸಹೋದರಿಯ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ನಮಗೆ ಹೆಮ್ಮೆಯ ವಿಚಾರ. ನಮ್ಮ ಭಾವನೆಯನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಆಕೆ ಎಂದಿಗೂ ಶಾಂತಿಪ್ರಿಯೆ ಹಾಗೂ ತನ್ನ ಗುರಿಯ ಬಗ್ಗೆ ಸ್ಪಷ್ಟತೆಯನ್ನು ಹೊಂದಿದಂತವಳು. ಆಕೆ ಏನೆಂಬುದನ್ನು ನಾನು ಬಾಲ್ಯದಿಂದಲೂ ಬಲ್ಲೆ. ಆಕೆಯು ಈ ಪಟ್ಟವನ್ನು ಅಲಂಕರಿಸುತ್ತಾಳೆ ಎಂಬ ನಂಬಿಕೆಯಿತ್ತು ಎಂದು ಹೇಳಿದ್ರು.

ಆಕೆ ಎಂದಿಗೂ ನಾನೇನಾದರೂ ವಿಶೇಷವಾಗಿ ಸಾಧಿಸಬೇಕು ಎಂದು ಹೇಳುತ್ತಿದ್ದಳು. ಆಕೆ ಮಿಸ್​ ಚಂಡೀಗಢ ಆಗಿದ್ದಾಳೆ, ಮಿಸ್​ ಪಂಜಾಬ್​ ಹೀಗೆ ಮುಂದುವರಿದು ಇದೀಗ ಆಕೆ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ್ದಾಳೆ ಎಂದು ಹೇಳಿದ್ರು.

Harnaaz Sandhu Miss Universe: Harnaaz Sandhu's first words after winning  the Miss Universe 2021 crown - The Economic Times

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...