alex Certify ವೈನ್ ಕುಡಿದು ವಾಹನ ಚಲಾಯಿಸಿದರೆ ಬಂಧಿಸುತ್ತೀರಾ….? ಪೊಲೀಸರಿಗೆ ಸವಾರನ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈನ್ ಕುಡಿದು ವಾಹನ ಚಲಾಯಿಸಿದರೆ ಬಂಧಿಸುತ್ತೀರಾ….? ಪೊಲೀಸರಿಗೆ ಸವಾರನ ಪ್ರಶ್ನೆ

ಮುಂಬೈ ಪೊಲೀಸರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಹಾಸ್ಯ ಮತ್ತು ಮಾಹಿತಿಯ ಸಮ್ಮಿಲನವಾಗಿದೆ. ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಜನಸಾಮಾನ್ಯರಿಗೆ ಶಿಕ್ಷಣ ನೀಡುವಾಗ ಇಲಾಖೆಯು ಸಾಕಷ್ಟು ಬಾರಿ ಹಾಸ್ಯ ಪ್ರವೃತ್ತಿಯಲ್ಲೆ ಮಾಹಿತಿ ನೀಡಿದೆ. ಅವರ ತಮಾಷೆಯ ಪೋಸ್ಟ್‌ಗಳು ಯಾವುದೇ ಸಮಯದಲ್ಲಿ ವೈರಲ್ ಆಗುತ್ತವೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಸೃಷ್ಟಿಯಾಗಿದೆ.

ಟ್ವಿಟ್ಟರ್ ಬಳಕೆದಾರ ಶಿವಂ ವಾಹಿಯಾ ಎನ್ನುವವರು ಶಿವಸೇನಾ ನಾಯಕ ಸಂಜಯ್ ರಾವತ್ ಅವರ ‘ವೈನ್ ಮದ್ಯವಲ್ಲ’ ಎಂಬ ಪೋಸ್ಟ್ ಅನ್ನು ರೀಟ್ವೀಟ್ ಮಾಡಿ,”ಹಾಗಾದರೆ ನಾನು ವೈನ್ ಕುಡಿದು ವಾಹನ ಚಲಾಯಿಸಿದರೆ, ಮುಂಬೈ ಪೋಲೀಸ್ ನನ್ನನ್ನು ಕಂಬಿಯ ಹಿಂದೆ ಹಾಕುತ್ತದೆಯೆ ಅಥವಾ ನನಗೆ ಹತ್ತಿರದ ಬಾರ್ ಅನ್ನು ತೋರಿಸುತ್ತದೆಯೇ?” ಎಂದು ಮುಂಬೈ ಪೊಲೀಸರನ್ನ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.‌ ಈ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ‌.

ಶಿವಂ ವಾಹಿಯಾ ಅವರ ಈ ಪ್ರಶ್ನೆಗೆ ಪೊಲೀಸ್ ಇಲಾಖೆಯು ಹಾಸ್ಯಮಯ ಉತ್ತರ ನೀಡಿದೆ. ನೀವು ಮದ್ಯಪಾನ ಮಾಡಿದ ನಂತರ, ಜವಾಬ್ದಾರಿಯುತ ನಾಗರಿಕರಂತೆ ಚಾಲಕ ಇರುವ ಕಾರಿನಲ್ಲಿ ಸವಾರಿ ಮಾಡಿ.‌ ಇಲ್ಲದಿದ್ದರೆ, ಬ್ರೀತ್‌ಅಲೈಸರ್ ನೀವು ಸೇವಿಸಿದ ವೈನ್‌ನಲ್ಲಿ ಆಲ್ಕೋಹಾಲ್ ಅಂಶವನ್ನು ಪತ್ತೆ ಮಾಡಿದರೆ, ನೀವು ಕಂಬಿಗಳ ಹಿಂದೆ ಸೇರಿ ನಮ್ಮ ಅತಿಥಿಯಾಗಬೇಕಾಗುತ್ತದೆ ಎಂದು ಮುಂಬೈ ಪೊಲೀಸರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.‌ ಸಧ್ಯ ಮುಂಬೈ ಪೊಲೀಸರ ಟ್ವೀಟ್ ಕೂಡ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮದ ಚರ್ಚಾವಿಷಯವಾಗಿ ಬದಲಾಗಿದೆ.

— Shivam Vahia (@ShivamVahia) January 28, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...