
ಟ್ವಿಟ್ಟರ್ ಬಳಕೆದಾರ ಶಿವಂ ವಾಹಿಯಾ ಎನ್ನುವವರು ಶಿವಸೇನಾ ನಾಯಕ ಸಂಜಯ್ ರಾವತ್ ಅವರ ‘ವೈನ್ ಮದ್ಯವಲ್ಲ’ ಎಂಬ ಪೋಸ್ಟ್ ಅನ್ನು ರೀಟ್ವೀಟ್ ಮಾಡಿ,”ಹಾಗಾದರೆ ನಾನು ವೈನ್ ಕುಡಿದು ವಾಹನ ಚಲಾಯಿಸಿದರೆ, ಮುಂಬೈ ಪೋಲೀಸ್ ನನ್ನನ್ನು ಕಂಬಿಯ ಹಿಂದೆ ಹಾಕುತ್ತದೆಯೆ ಅಥವಾ ನನಗೆ ಹತ್ತಿರದ ಬಾರ್ ಅನ್ನು ತೋರಿಸುತ್ತದೆಯೇ?” ಎಂದು ಮುಂಬೈ ಪೊಲೀಸರನ್ನ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. ಈ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ.
ಶಿವಂ ವಾಹಿಯಾ ಅವರ ಈ ಪ್ರಶ್ನೆಗೆ ಪೊಲೀಸ್ ಇಲಾಖೆಯು ಹಾಸ್ಯಮಯ ಉತ್ತರ ನೀಡಿದೆ. ನೀವು ಮದ್ಯಪಾನ ಮಾಡಿದ ನಂತರ, ಜವಾಬ್ದಾರಿಯುತ ನಾಗರಿಕರಂತೆ ಚಾಲಕ ಇರುವ ಕಾರಿನಲ್ಲಿ ಸವಾರಿ ಮಾಡಿ. ಇಲ್ಲದಿದ್ದರೆ, ಬ್ರೀತ್‌ಅಲೈಸರ್ ನೀವು ಸೇವಿಸಿದ ವೈನ್‌ನಲ್ಲಿ ಆಲ್ಕೋಹಾಲ್ ಅಂಶವನ್ನು ಪತ್ತೆ ಮಾಡಿದರೆ, ನೀವು ಕಂಬಿಗಳ ಹಿಂದೆ ಸೇರಿ ನಮ್ಮ ಅತಿಥಿಯಾಗಬೇಕಾಗುತ್ತದೆ ಎಂದು ಮುಂಬೈ ಪೊಲೀಸರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಸಧ್ಯ ಮುಂಬೈ ಪೊಲೀಸರ ಟ್ವೀಟ್ ಕೂಡ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮದ ಚರ್ಚಾವಿಷಯವಾಗಿ ಬದಲಾಗಿದೆ.
https://twitter.com/ShivamVahia/status/1487111688407162886?ref_src=twsrc%5Etfw%7Ctwcamp%5Etweetembed%7Ctwterm%5E1487111688407162886%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fwill-drinking-wine-and-driving-now-bring-people-behind-the-bars-mumbai-police-s-response-is-viral-1906383-2022-01-30