alex Certify ಮತ್ತೆ ಅಧಿಕಾರಕ್ಕೆ ಬರ್ತೇವೆ: ಮೇರಿಲ್ಯಾಂಡ್ ನಲ್ಲಿ ವಿದಾಯ ಭಾಷಣದ ವೇಳೆ ಭಾವುಕರಾದ ಡೊನಾಲ್ಡ್ ಟ್ರಂಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಅಧಿಕಾರಕ್ಕೆ ಬರ್ತೇವೆ: ಮೇರಿಲ್ಯಾಂಡ್ ನಲ್ಲಿ ವಿದಾಯ ಭಾಷಣದ ವೇಳೆ ಭಾವುಕರಾದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ವಿಶ್ವದಲ್ಲೇ ಅತ್ಯುತ್ತಮ ಅರ್ಥ ವ್ಯವಸ್ಥೆಯನ್ನು ಹೊಂದಿದೆ ಎಂದು ಮೇರಿಲ್ಯಾಂಡ್ನಲ್ಲಿ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದಾಯ ಭಾಷಣ ಮಾಡಿದ್ದಾರೆ.

ಕೊರೋನಾ ನಿಯಂತ್ರಿಸುವಲ್ಲಿಯೂ ನಾವು ಸಫಲರಾಗಿದ್ದೇವೆ. ನಾವು ತೆರಿಗೆ ಕಡಿಮೆ ಮಾಡಿ ಜನರಿಗೆ ಹೊರೆ ತಗ್ಗಿಸಿದ್ದೆವು. ನಾವು ಏನೇ ಮಾಡಿದರೂ ಒಳ್ಳೆಯದನ್ನೇ ಮಾಡಿದ್ದೇವೆ ಎಂದು ವಿದಾಯ ಭಾಷಣದ ವೇಳೆ ಡೊನಾಲ್ಡ್ ಟ್ರಂಪ್ ಭಾವುಕರಾಗಿ ಹೇಳಿದ್ದಾರೆ.

ನಾವು ಜನರ ಸೇವೆ ಮಾಡಿ ಅವರಿಗೆ ನೆರವಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿಯಾಗಿರುತ್ತೇನೆ. ಅಧ್ಯಕ್ಷರಾಗಿ ನಾವು ಒಟ್ಟಿಗೆ ತುಂಬಾ ಸಾಧಿಸಿದ್ದೇವೆ. ಈ ಕುಟುಂಬ ಎಷ್ಟು ಶ್ರಮವಹಿಸಿದೆ ಎಂದು ಜನರಿಗೆ ತಿಳಿದಿಲ್ಲ. ನಾವು ವಿಶ್ವದ ಶ್ರೇಷ್ಠ ದೇಶ ಬಲಿಷ್ಠ ಆರ್ಥಿಕತೆ ಹೊಂದಿದ್ದೇವೆ. ಕೊರೋನಾ ಮಹಾಮಾರಿಯಿಂದ ಬಹಳಷ್ಟು ತೊಂದರೆಯಾಯಿತು. ನಾವು 9 ತಿಂಗಳಲ್ಲಿ ಕೊರೋನಾಗೆ ಲಸಿಕೆ ತಯಾರಿಸಿದ್ದೇವೆ. ನಾನು ಸದಾ ಕಾಲ ಅಮೆರಿಕದ ಜನತೆಯ ಹಿತಕ್ಕಾಗಿ ಶ್ರಮಿಸುತ್ತೇನೆ. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಡೊನಾಲ್ಡ್ ಟ್ರಂಪ್ ವಿದಾಯ ಭಾಷಣ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...