alex Certify SHOCKING: ಮನೆಯಲ್ಲೇ ಪರಪುರುಷರೊಂದಿಗೆ ಪತ್ನಿ ಸರಸಕ್ಕೆ ಬಿಟ್ಟು ದೃಶ್ಯ ಸೆರೆ ಹಿಡಿಯುತ್ತಿದ್ದ ವಿಕೃತ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮನೆಯಲ್ಲೇ ಪರಪುರುಷರೊಂದಿಗೆ ಪತ್ನಿ ಸರಸಕ್ಕೆ ಬಿಟ್ಟು ದೃಶ್ಯ ಸೆರೆ ಹಿಡಿಯುತ್ತಿದ್ದ ವಿಕೃತ ಅರೆಸ್ಟ್

 ಬೆಂಗಳೂರು: ಪರಪುರುಷರೊಂದಿಗೆ ಪತ್ನಿಯ ಲೈಂಗಿಕಕ್ರಿಯೆ ದೃಶ್ಯಗಳನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿ ನೋಡುತ್ತಿದ್ದಲ್ಲದೆ ಅದನ್ನು ದಂಧೆ ಮಾಡಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಮೂಲದ ವ್ಯಕ್ತಿ ಬಂಧಿತ ಆರೋಪಿ. ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಹಲವು ತಿಂಗಳಿಂದ ಇಂತಹ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆತನನ್ನು 14 ದಿನಗಳ ಕಾಲ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಯುವಕ, ಮಾಗಡಿಯ ಯುವತಿ ಎಲೆಕ್ಟ್ರಾನಿಕ್ಸ್ ಶಾಪ್ ಒಂದರಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ ಪ್ರೀತಿಸಿದ್ದಾರೆ. ಪೋಷಕರ ವಿರೋಧದ ನಡುವೆಯೂ 2019 ರಲ್ಲಿ ಮದುವೆಯಾಗಿದ್ದು, ದಂಪತಿಗೆ ಒಂದೂವರೆ ವರ್ಷದ ಮಗು ಇದೆ.

ಪರಪ್ಪನ ಅಗ್ರಹಾರ ಸಮೀಪದ ಸಿಂಗಸಂದ್ರದಲ್ಲಿ ದಂಪತಿ ವಾಸವಾಗಿದ್ದಾರೆ. ಆರೋಪಿ ಪೋರ್ನ್ ವಿಡಿಯೋ ನೋಡುತ್ತಿದ್ದ. ಮುಖ ಗೊತ್ತಾಗದಂತೆ ಪತ್ನಿಯೊಂದಿಗಿನ ಸರಸದ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ. ಬಳಿಕ ಫ್ಯಾಂಟಸಿ ಸೆಕ್ಸ್ ಗೆ ಒಪ್ಪಿಸಿ ಹೈಟೆಕ್ ವೈಫ್ ಸ್ವಾಪಿಂಗ್ ಗೆ ಒಪ್ಪಿಸಿದ್ದು, ಟ್ವಿಟರ್ ಮಹಿಳೆ ಹೆಸರಲ್ಲಿ ವೈಫ್ ಸ್ವಾಪಿಂಗ್ ಬಗ್ಗೆ ಆಹ್ವಾನ ನೀಡಿದ್ದ. ಗ್ರಾಹಕರು ಸಂಪರ್ಕಿಸುತ್ತಿದ್ದಂತೆ ಮನೆಗೆ ಕರೆಸಿಕೊಂಡು ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಗಿರಾಕಿಗಳು ಒಪ್ಪಿದರೆ ವಿಡಿಯೋ ಮಾಡಿಕೊಳ್ಳುತ್ತಿದ್ದ. ಅವರು ಕೊಟ್ಟಷ್ಟು ಹಣ ಪಡೆದುಕೊಳ್ಳುತ್ತಿದ್ದ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...