alex Certify ಬಲವಂತವಾಗಿ ಬೆತ್ತಲೆ ಫೋಟೋ ತೆಗೆದು ಪತ್ನಿಗೆ ಉದ್ಯಮಿ ಬ್ಲಾಕ್ಮೇಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲವಂತವಾಗಿ ಬೆತ್ತಲೆ ಫೋಟೋ ತೆಗೆದು ಪತ್ನಿಗೆ ಉದ್ಯಮಿ ಬ್ಲಾಕ್ಮೇಲ್

ಬೆಂಗಳೂರು: ಬಲವಂತವಾಗಿ ಪತ್ನಿ ಬೆತ್ತಲೆ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಗಂಡನ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ.

ಲಕ್ಕಸಂದ್ರ ನಿವಾಸಿಯಾಗಿರುವ 26 ವರ್ಷದ ಮಹಿಳೆ ಬಸವನಗುಡಿ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಹನುಮಂತನಗರ ನಿವಾಸಿಯಾಗಿರುವ ಉದ್ಯಮಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 2015 ರಲ್ಲಿ ದಂಪತಿಗೆ ಮದುವೆಯಾಗಿದ್ದು, ಮದುವೆ ಸಂದರ್ಭದಲ್ಲಿ ಅರ್ಧ ಕೆಜಿ ಚಿನ್ನಾಭರಣ, 15 ಕೆಜಿ ಬೆಳ್ಳಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವರದಕ್ಷಿಣೆಯಾಗಿ ಪಡೆದುಕೊಂಡಿದ್ದ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ಪತಿ ನಂತರ ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಬಳಿಕ ಆತನಿಗೆ ಮಹಿಳೆಯ ಪೋಷಕರು 40 ಲಕ್ಷ ರೂಪಾಯಿ ಕೊಟ್ಟಿದ್ದಾರೆರೆ.

ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ ಆರೋಪಿ, ಬಲವಂತವಾಗಿ ಪತ್ನಿಯ ಬೆತ್ತಲೆ ಫೋಟೋಗಳನ್ನು ತೆಗೆದು ಕಿರುಕುಳ ನೀಡಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಅಲ್ಲದೇ, ಪತ್ನಿ ತಂದೆಯ ಅರ್ಧ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಡಬೇಕು. ನಂತರ ಡೈವೋರ್ಸ್ ನೀಡಬೇಕು. ಇಲ್ಲದಿದ್ದರೆ ಬೆತ್ತಲೆ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದು, ನೊಂದ ಮಹಿಳೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...