alex Certify ಸೊಸೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಮಾವ: ಜೀವ ತೆಗೆದ ಕುಟುಂಬ ಸದಸ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಸೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಮಾವ: ಜೀವ ತೆಗೆದ ಕುಟುಂಬ ಸದಸ್ಯರು

ಉತ್ತರಪ್ರದೇಶದ ಭದೋಹಿ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಮಗನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಹಿರಿಯ ಸೊಸೆ ಕೊಲೆ ಮಾಡಿದ್ದಾರೆ.

ಕೊಯಿರಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 55 ವರ್ಷದ ವ್ಯಕ್ತಿ ತನ್ನ ಮಗನ ಪತ್ನಿಯೊಂದಿಗೆ ಸಂಬಂಧ ಹೊಂದಿದ ವಿಚಾರ ಆತನ ಪತ್ನಿ ಮತ್ತು ಹಿರಿಯ ಮಗನ ಪತ್ನಿಗೆ ಗೊತ್ತಾಗಿದೆ. ಇವರಿಬ್ಬರೂ ಸೇರಿಕೊಂಡು ಆತನನ್ನು ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.

ಭದೋಹಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಬದನ್ ಸಿಂಗ್ ನೀಡಿರುವ ಮಾಹಿತಿಯಂತೆ, ಮೃತಪಟ್ಟ ವ್ಯಕ್ತಿಗೆ ನಾಲ್ವರು ಗಂಡು ಮಕ್ಕಳಿದ್ದು ಮುಂಬೈನಲ್ಲಿ ವಲಸೆ ಕಾರ್ಮಿಕರಾಗಿದ್ದಾರೆ. ಇಬ್ಬರು ಮಕ್ಕಳಿಗೆ ಮದುವೆಯಾಗಿದ್ದು, ಅತ್ತೆ ಮಾವನೊಂದಿಗೆ ಸೊಸೆಯಂದಿರು ವಾಸವಾಗಿದ್ದಾರೆ.

ಈ ನಡುವೆ ಕಿರಿಯ ಸೊಸೆಯ ಜೊತೆ ವ್ಯಕ್ತಿಗೆ ಅಕ್ರಮ ಸಂಬಂಧ ಬೆಳೆದಿದೆ. ಈ ವಿಚಾರ ಆತನ ಪತ್ನಿ ಮತ್ತು ಹಿರಿಯ ಸೊಸೆಗೆ ಗೊತ್ತಾಗಿ ಕಿರಿಯ ಸೊಸೆಯನ್ನು ಊರಿಗೆ ಕಳುಹಿಸಿದ್ದಾರೆ. ಇದರಿಂದ ಜಗಳವಾಡಿದ ವ್ಯಕ್ತಿ ಹಿರಿಯ ಸೊಸೆ ಮತ್ತು ಪತ್ನಿಯನ್ನು ಮನೆಯಿಂದ ಹೊರಹಾಕಿದ್ದು, ತವರು ಮನೆಯಲ್ಲಿದ್ದ ಕಿರಿಯ ಸೊಸೆಯನ್ನು ಕರೆಸಿಕೊಂಡಿದ್ದಾನೆ.

ಈ ವಿಚಾರ ತಿಳಿದ ವ್ಯಕ್ತಿಯ ಆತನ ಪತ್ನಿ ಮತ್ತು ಹಿರಿಯ ಸೊಸೆ ಶನಿವಾರ ತಡರಾತ್ರಿ ಮನೆಯೊಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಅಲ್ಲದೆ, ವ್ಯಕ್ತಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಕಿರಿಯ ಸೊಸೆ ಮನೆಯಿಂದ ಓಡಿಹೋಗಿ ಜೀವ ಉಳಿಸಿಕೊಂಡಿದ್ದಾಳೆ. ಪೊಲೀಸ್ ಠಾಣೆಗೆ ತೆರಳಿದ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...