alex Certify ಪತಿ ಹತ್ಯೆ ನಂತ್ರ ಖಾಸಗಿ ಅಂಗ ಕತ್ತರಿಸಿ ಬೇಯಿಸಿದ ಪತ್ನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಹತ್ಯೆ ನಂತ್ರ ಖಾಸಗಿ ಅಂಗ ಕತ್ತರಿಸಿ ಬೇಯಿಸಿದ ಪತ್ನಿ..!

ಬ್ರೆಜಿಲ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆಯೊಬ್ಬಳು ಪತಿ ಹತ್ಯೆ ಮಾಡಿ ಖಾಸಗಿ ಭಾಗವನ್ನು ಕತ್ತರಿಸಿ ಅದನ್ನು ಬೇಯಿಸಿದ್ದಾಳೆ.  ಆರೋಪಿ 33 ವರ್ಷದ ಮಹಿಳೆ ದಯಾನೆ ಕ್ರಿಸ್ಟಿನಾ ರೊಡ್ರಿಗಸ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಸುದ್ದಿಯ ಪ್ರಕಾರ, ಮೃತನ ಹೆಸರು ಆಂಡ್ರೆ. ನೆರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಬೆತ್ತಲೆಯಾಗಿ ಬಿದ್ದಿದ್ದ ಆಂಡ್ರೆ ಶವ ಸಿಕ್ಕಿದೆ. ಕೋಣೆಯ ನೋಟ ಭಯಾನಕವಾಗಿತ್ತಂತೆ. ಆಂಡ್ರೆ ಕಣ್ಣು ತೆಗೆಯಲಾಗಿತ್ತಂತೆ. ಎಲ್ಲೆಡೆ ರಕ್ತವಿತ್ತೆಂದು ಪೊಲೀಸರು ಹೇಳಿದ್ದಾರೆ. ಆಂಡ್ರೆ ಖಾಸಗಿ ಅಂಗ ಪ್ಯಾನ್ ನಲ್ಲಿ ಬೇಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಜೂನ್ 7 ರಂದು ಮುಂಜಾನೆ 4 ಗಂಟೆ ಸುಮಾರಿಗೆ ದಂಪತಿ ಮಧ್ಯೆ ಗಲಾಟೆ ಶುರುವಾಗಿದೆ. ಕೋಪಗೊಂಡ ಪತ್ನಿ ಹರಿತ ಆಯುಧದಿಂದ ಆಂಡ್ರೆ ಹತ್ಯೆ ಮಾಡಿದ್ದಾಳೆ. ತರಕಾರಿ ಕತ್ತರಿಸುವ ಚಾಕು ಸ್ಥಳದಲ್ಲಿ ಸಿಕ್ಕಿದೆ. 10 ವರ್ಷಗಳಿಂದ ಒಟ್ಟಿಗೆ ಇದ್ದ ದಂಪತಿ ಮಧ್ಯೆ ಕೆಲ ದಿನಗಳ ಹಿಂದೆ ಗಲಾಟೆ ಶುರುವಾಗಿತ್ತು. ಇಬ್ಬರೂ ಫಿಜ್ಜಾ ಅಂಗಡಿ ನಡೆಸುತ್ತಿದ್ದರು. ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹೊಂದಿರುವ ದಯಾನೆ, ಮಕ್ಕಳ ಮುಂದೆಯೇ ಈ ಕೃತ್ಯವೆಸಗಿದ್ದಾಳಾ ಎಂಬುದು ಸ್ಪಷ್ಟವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...