alex Certify ಮದುವೆ ಸಮಯದಲ್ಲಿ ಮಾಡಿದ ಒಪ್ಪಂದಕ್ಕೆ ಪಿಜ್ಜಾಹಟ್ ​ನಿಂದ ಉಡುಗೊರೆ; ಪ್ರತಿ ತಿಂಗಳು ಉಚಿತವಾಗಿ ಸಿಗುತ್ತೆ ಪಿಜ್ಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಮಯದಲ್ಲಿ ಮಾಡಿದ ಒಪ್ಪಂದಕ್ಕೆ ಪಿಜ್ಜಾಹಟ್ ​ನಿಂದ ಉಡುಗೊರೆ; ಪ್ರತಿ ತಿಂಗಳು ಉಚಿತವಾಗಿ ಸಿಗುತ್ತೆ ಪಿಜ್ಜಾ

ಅಸ್ಸಾಂ: ಮದುವೆಯು ಪ್ರೀತಿ, ವಿಶ್ವಾಸ ಮತ್ತು ಪ್ರಾಮಾಣಿಕತೆಯ ಅಡಿಪಾಯ ಹೊಂದಿದೆ. ಆದರೆ ಬದಲಾದ ಸನ್ನಿವೇಶದಲ್ಲಿ ಪಿಜ್ಜಾ ಕೂಡ ! ಅದೇಕೆ ಅಂತೀರಾ?

ಕೆಲ ತಿಂಗಳ ಹಿಂದೆ ಅಸ್ಸಾಂನ ದಂಪತಿ ತಮ್ಮ ಮದುವೆಯಲ್ಲಿ ಕುತೂಹಲದ ಒಪ್ಪಂದಕ್ಕೆ ಸಹಿ ಹಾಕಿದ್ದು ಭಾರಿ ಸುದ್ದಿಯಾಗಿತ್ತು. ಶಾಂತಿ ಪ್ರಸಾದ್ ಮತ್ತು ಮಿಂಟು ರೈ ಕಳೆದ ಜೂನ್ 21 ರಂದು ವಿವಾಹವಾಗಿದ್ದಾರೆ. ಮದುವೆಯ ಸಂದರ್ಭದಲ್ಲಿ ಮಿಂಟು ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದರು. ಅದೇನೆಂದರೆ, ಪ್ರತಿ ದಿನ ಜಿಮ್‌ಗೆ ಹೋಗುವುದು, ಪ್ರತಿ 15 ದಿನಗಳ ನಂತರ ಶಾಪಿಂಗ್ ಮಾಡುವುದು ಮತ್ತು ಪ್ರತಿ ತಿಂಗಳು ಒಂದು ಪಿಜ್ಜಾ ತಿನ್ನುವುದು ಈ ಪಟ್ಟಿಯಲ್ಲಿ ಸೇರಿತ್ತು.

ಇದು ವೈರಲ್​ ಆಗುತ್ತಿದ್ದಂತೆಯೇ ಪಿಜ್ಜಾ ಹಟ್ ಇಂಡಿಯಾ ದಂಪತಿ ತಿಂಗಳಿಗೊಮ್ಮೆ ಉಚಿತ ಪಿಜ್ಜಾಗಳನ್ನು ಇಡೀ ವರ್ಷಕ್ಕೆ ನೀಡುವುದಾಗಿ ಘೋಷಿಸಿತ್ತು. ಅದರಂತೆಯೇ ಇದೀಗ ಪಿಜ್ಜಾ ಹಟ್ ಇಂಡಿಯಾ ಕರ್ವಾಚೌತ್​ ನಿಮಿತ್ತ ನೀಡಿರುವ ಪಿಜ್ಜಾವನ್ನು ದಂಪತಿ ಸವಿಯುತ್ತಿದ್ದಾರೆ. ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

“ನಿಮ್ಮ ಪತಿಯೊಂದಿಗೆ ದೀರ್ಘ ಮತ್ತು ಸಂತೋಷದ ಜೀವನಕ್ಕಾಗಿ ತಿಂಗಳಿಗೊಂದು ಪಿಜ್ಜಾ! ಅದಕ್ಕಾಗಿಯೇ ನಾವು ಜೀವಿಸುತ್ತಿದ್ದೇವೆ. ಎಲ್ಲಾ ಪಿಜ್ಜಾ-ಪ್ರೀತಿಯ ಸಂತೋಷದ ದಂಪತಿಗೆ, ಕರ್ವಾಚೌತ್​ ಶುಭಾಶಯಗಳು(#HappyKarvaChauth)” ಎಂದು ಪಿಜ್ಜಾ ಹಟ್ ಇಂಡಿಯಾ ಹೇಳಿದ್ದು ಇದರ ಫೋಟೋ ವೈರಲ್​ ಆಗುತ್ತಿದೆ.

Instagram Screengrab

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...