ಕ್ಯಾಲಿಫೋರ್ನಿಯಾದ ಬೀದಿಯಲ್ಲಿ 27 ವರ್ಷದ ಮರೀಕೆ ಬೇಯೆನ್ಸ್ ಬಳಿ ದರೋಡೆ ಮಾಡಿದ ಇಬ್ಬರು ಕಳ್ಳರಿಗೆ ಬೇಕಿದ್ದಿದ್ದು ಆಕೆಯ ಪರ್ಸ್ ಅಲ್ಲ ಅವರಿಗೆ ಬೇಕಿದ್ದಿದ್ದು ಆಕೆಯ ಬಳಿ ಇದ್ದ ಪುಟ್ಟ ನಾಯಿ — ಮೆರ್ಲಿನ್, ಫ್ರೆಂಚ್ ಬುಲ್ಡಾಗ್.
ನ್ಯೂಯಾರ್ಕ್ನಿಂದ ಲಾಸ್ ಏಂಜಲೀಸ್ವರೆಗೆ ಮತ್ತು ಮಿಯಾಮಿಯಿಂದ ಚಿಕಾಗೋವರೆಗೆ ಅತ್ಯಂತ ಬೆಲೆಬಾಳುವ ಈ ತಳಿಯ ಶ್ವಾನಗಳ ಕಳ್ಳತನಗಳು ಹೆಚ್ಚುತ್ತಿವೆ.
Online ನಲ್ಲಿ ಮೂತ್ರ ಮಾರಿ ಲಕ್ಷಾಂತರ ರೂಪಾಯಿ ದುಡ್ಡು ಮಾಡುತ್ತಿರುವ ಮಾಡೆಲ್
ಪುಟ್ಟದಾದ ಮತ್ತು ಸ್ನೇಹಶೀಲವಾಗಿರುವ ಫ್ರೆಂಚ್ ಬುಲ್ಡಾಗ್ಗಳು ಭಾರೀ ಜನಪ್ರಿಯವಾಗಿವೆ. ಈ ಶ್ವಾನಗಳು ಕಾಳ ಸಂತೆಯಲ್ಲಿ ಸಾವಿರಾರು ಡಾಲರ್ಗಳಿಗೆ ಮಾರಾಟವಾಗುತ್ತವೆ.
ಇವುಗಳ ಪೈಕಿ ಅತ್ಯಂತ ಜನಪ್ರಿಯಳಾದ ಸಂತ್ರಸ್ತೆ ಲೇಡಿ ಗಾಗಾ. ಕಳೆದ ವರ್ಷ ಈಕೆಯ ಸಾಕು ನಾಯಿಗಳಾದ ಕೋಜಿ ಮತ್ತು ಗುಸ್ತಾವ್ರನ್ನು ಶಸ್ತ್ರಸಜ್ಜಿತ ಕಳ್ಳರು ಕದ್ದಿದ್ದರು.
ತಮ್ಮ ನಾಯಿಗಳನ್ನು ಮರಳಿ ತಂದವರಿಗೆ $500,000 ದ ಇನಾಮನ್ನು ಸಹ ಸೂಪರ್ಸ್ಟಾರ್ ಗಾಯಕಿ ಘೋಷಿಸಿದ್ದು, ನಾಯಿಗಳನ್ನು ಮರಳಿ ಪಡೆದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದರು.
ಇಂಥದ್ದೇ ಶೈಲಿಯಲ್ಲಿ ಬುಲ್ಡಾಗ್ಗಳನ್ನು ಕದಿಯಲು ಕಳ್ಳರು ಮುಂದಾಗುತ್ತಿರುವುದು ಅಮೆರಿಕದಲ್ಲಿ ಈ ಶ್ವಾನಗಳಿಗೆ ಅದ್ಯಾವ ಮಟ್ಟದ ಡಿಮ್ಯಾಂಡ್ ಇದೆ ಎಂದು ಸಾರಿ ಹೇಳುತ್ತಿದೆ.