alex Certify ಪುರುಷರ ಶರ್ಟ್​ ಕಫ್​ನಲ್ಲಿ ಎರಡು ಬಟನ್​ಗಳೇಕೆ ? ಸ್ಟೈಲಿಸ್ಟ್​ ನೀಡಿದ್ದಾರೆ ಈ ವಿವರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರ ಶರ್ಟ್​ ಕಫ್​ನಲ್ಲಿ ಎರಡು ಬಟನ್​ಗಳೇಕೆ ? ಸ್ಟೈಲಿಸ್ಟ್​ ನೀಡಿದ್ದಾರೆ ಈ ವಿವರಣೆ

ಪುರುಷರ ಪ್ರತಿಯೊಂದು ಉದ್ದ ಕೈಗಳ ಶರ್ಟ್​ಗಳ ಕಫ್‌ನಲ್ಲಿ ಎರಡು ಬಟನ್‌ಗಳಿರುತ್ತವೆ ಎನ್ನುವುದನ್ನು ನೀವು ನೋಡಿರುತ್ತೀರಿ ಅಲ್ಲವೆ? ಆದರೆ ಎಲ್ಲಾ ಶರ್ಟ್​ಗಳಿಗೂ ಎರಡೇ ಬಟನ್​ಗಳನ್ನು ಏಕೆ ಇಟ್ಟಿರುತ್ತಾರೆ ಎಂದು ನೀವೇನಾದರೂ ಯೋಚನೆ ಮಾಡಿದ್ದೀರಾ ಅಥವಾ ಈಗ ಈ ಪ್ರಶ್ನೆ ಕೇಳಿದ ಬಳಿಕ ಅದ್ಯಾಕೆ ಎರಡೇ ಬಟನ್​ಗಳು ಇರಬಹುದು ಎಂದು ಊಹಿಸಿದ್ದೀರಾ?

ಇದು ಫ್ಯಾಷನ್​ ಅಥವಾ ಅಲಂಕಾರಕ್ಕೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು ಎಂದು ಟಿಕ್‌ಟಾಕ್‌ನಲ್ಲಿ @joe_x_style ಖಾತೆಯನ್ನು ನಡೆಸುತ್ತಿರುವ ಸ್ಟೈಲಿಸ್ಟ್ ಜೋ ಹೇಳಿದ್ದಾರೆ. ಒಂದು ವೇಳೆ ನಿಮಗೆ ಈ ಉತ್ತರ ಗೊತ್ತಿಲ್ಲದಿದ್ದರೆ ನಾವು ಹೇಳುತ್ತೇನೆ ಕೇಳಿ ಎಂದಿದ್ದಾರೆ ಜೋ.

ವೀಡಿಯೊದಲ್ಲಿ ಬಟನ್‌ಗಳನ್ನು ತೋರಿಸುತ್ತಾ, ಅವರು ವಿವರಿಸಿದ್ದಾರೆ. ಬಲಗೈಯನ್ನು ಬಳಸುವವರು ಯಾವಾಗಲೂ ತಮ್ಮ ಬಲಗೈಯಲ್ಲಿ ಬಿಗಿಯಾದ ಬಟನ್​ ಬಯಸುತ್ತಾರೆ.

ಇನ್ನೊಂದು ಕೈಯಲ್ಲಿ ಅವರು ವಾಚ್​ ಕಟ್ಟುವ ಹಿನ್ನೆಲೆಯಲ್ಲಿ ವಾಚ್​ ನೋಡಲು ಸುಲಭವಾಗಲಿ ಎಂದು ಲೂಸ್​ ಬಟನ್​ ಇಷ್ಟಪಡುತ್ತಾರೆ. ಎಡಗೈಯನ್ನು ಕೆಲಸ ಕಾರ್ಯಗಳಿಗೆ ಬಳಸುವವರು, ಎಡಗೈಯಲ್ಲಿ ಬಿಗಿಯಾದ ಬಟನ್​ ಬಯಸಿದರೆ, ಅಂಥವರು ಬಲಗೈಗೆ ಹೆಚ್ಚಾಗಿ ವಾಚ್​ ಕಟ್ಟುತ್ತಾರೆ. ಆಗ ಬಲಗೈ ಬಟನ್​ ಸಡಿಲ ಬಯಸುತ್ತಾರೆ. ಇದೇ ಕಾರಣಕ್ಕೆ ಎರಡೂ ಕೈಗಳಲ್ಲಿ ಎರಡು ಬಟನ್​ ಇಟ್ಟು ಒಂದು ಟೈಟ್​ ಒಂದು ಲೂಸ್​ ಬಟನ್​ ಇಡುತ್ತಾರೆ ಎಂದು ಅವರು ವಿವರಿಸಿದ್ದಾರೆ.

ವಿಭಿನ್ನ ಮಣಿಕಟ್ಟಿನ ಗಾತ್ರ ಹೊಂದಿರುವ ಜನರಿಗಾಗಿ ಈ ರೀತಿ ಮಾಡಿರುವುದಾಗಿ ತಾವು ಅಂದುಕೊಂಡಿದ್ದು, ಈ ಬಗ್ಗೆ ಯೋಚನೆಯೇ ಮಾಡಿರಲಿಲ್ಲ ಎಂದು ಹಲವರು ಕಮೆಂಟ್​ನಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...