alex Certify ಡಿಸೆಂಬರ್ ನಲ್ಲಿ ಅತಿ ಹೆಚ್ಚು ಮಂದಿ ಮದ್ವೆಯಾಗ್ತಾರೆ ಏಕೆ ಗೊತ್ತಾ ? ಇಲ್ಲಿದೆ ನೆಟ್ಟಿಗರು ನೀಡಿದ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸೆಂಬರ್ ನಲ್ಲಿ ಅತಿ ಹೆಚ್ಚು ಮಂದಿ ಮದ್ವೆಯಾಗ್ತಾರೆ ಏಕೆ ಗೊತ್ತಾ ? ಇಲ್ಲಿದೆ ನೆಟ್ಟಿಗರು ನೀಡಿದ ಉತ್ತರ

ಜನಪ್ರಿಯ ಯೂಟ್ಯೂಬರ್ ಜೋಡಿ ಅಭಿ ಮತ್ತು ನಿಯು ತಮ್ಮ ಟ್ವಿಟರ್​ನಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದು, ಇದಕ್ಕೆ ಹಾಸ್ಯಭರಿತ ಕಮೆಂಟ್​ಗಳು ಬರುತ್ತಿವೆ. ಅಷ್ಟಕ್ಕೂ ಅವರು ಕೇಳಿರುವ ಪ್ರಶ್ನೆ ಎಂದರೆ “ಎಲ್ಲರೂ ಡಿಸೆಂಬರ್‌ನಲ್ಲಿ ಏಕೆ ಮದುವೆಯಾಗುತ್ತಿದ್ದಾರೆ?”ಎಂದು.

ನಿಮ್ಮ ಮನಸ್ಸಿನಲ್ಲಿಯೂ ಈ ಪ್ರಶ್ನೆ ಕೊರೆಯುತ್ತಿದ್ದರೆ, ಅದಕ್ಕೆ ಕಮೆಂಟಿಗರು ನೀಡಿರುವ ನಕ್ಕು ನಗಿಸುವ ಉತ್ತರಗಳನ್ನು ಓದಲೇಬೇಕು.

“ಚಳಿಗಾಲ” ಆಗಿರುವ ಕಾರಣ, ಉಷ್ಣತೆ ಪಡೆಯಲು ಹೆಚ್ಚಿನವರು ಡಿಸೆಂಬರ್​ ತಿಂಗಳನ್ನು ಆಯ್ದುಕೊಳ್ಳುತ್ತಾರೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಮತ್ತೆ ಕೆಲವರು “ಚಳಿಗಾಲದಲ್ಲಿ ಹನಿಮೂನ್ ಅತ್ಯಂತ ಆನಂದದಾಯಕವಾಗಿರುತ್ತದೆ” ಎಂದು ಉತ್ತರಿಸಿದ್ದಾರೆ.

ಮದುವೆಯ ದಿನಗಳಲ್ಲಿ ಭಾರವಾದ ಡ್ರೆಸ್​ ಧರಿಸಬೇಕು. ಆದ್ದರಿಂದ ಚಳಿಗಾಲವಾದರೆ ಸಮಸ್ಯೆಯಾಗುವುದಿಲ್ಲ. ಬೇಸಿಗೆಯಲ್ಲಿ ಮೈಯೆಲ್ಲಾ ಬೆವರಿ ಹೋಗುತ್ತದೆ ಎಂದು ಕೆಲವರು ಹೇಳಿದ್ದರೆ, ಮೇಕಪ್​ ಮಾಡಿಕೊಂಡರೆ ಚಳಿಗಾಲದಲ್ಲಿ ಹಾಗೆಯೇ ಇರುತ್ತದೆ, ಬೇಸಿಗೆಯಲ್ಲಿ ಬೆವರಿ ಅಸಲಿ ಬಣ್ಣ ತಿಳಿದು ಬರುತ್ತದೆ ಎಂದು ಕೆಲವರು ತಮಾಷೆಯ ಉತ್ತರ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...