alex Certify ನಾಯಿಗಳೇಕೆ ಮೂತ್ರ ವಿಸರ್ಜಿಸಲು ಕಂಬ ಅಥವಾ ಕಾರ್‌ ಟೈರ್‌ಗಳನ್ನು ಹುಡುಕುತ್ತವೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಗಳೇಕೆ ಮೂತ್ರ ವಿಸರ್ಜಿಸಲು ಕಂಬ ಅಥವಾ ಕಾರ್‌ ಟೈರ್‌ಗಳನ್ನು ಹುಡುಕುತ್ತವೆ…?

ನಿತ್ಯ ಬದುಕಿನಲ್ಲಿ ನಾವು ಆಗಾಗ್ಗೆ ನೋಡುವ ಅನೇಕ ವಿಷಯಗಳಿವೆ. ಆದರೆ ಅವುಗಳ ಹಿಂದಿನ ಕಾರಣ ತಿಳಿಯಲು ಪ್ರಯತ್ನಿಸುವುದಿಲ್ಲ. ನಮ್ಮ ಕಣ್ಣುಗಳು ಅಂತಹ ವಿಷಯಗಳಿಗೆ ಒಗ್ಗಿಕೊಂಡಿವೆ. ಅಂತಹ ಒಂದು ವಿಷಯ ನಾಯಿಗಳ ಮೂತ್ರ ವಿಸರ್ಜನೆ. ಅವುಗಳು ಟೈರ್ ಅಥವಾ ಕಂಬಗಳನ್ನು ಹುಡುಕಿ ಮೂತ್ರ ವಿಸರ್ಜಿಸುತ್ತವೆ. ಯಾಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ಪ್ರಾಣಿಗಳ ಈ ನಡವಳಿಕೆಯ ಬಗ್ಗೆ ಶ್ವಾನ ತಜ್ಞರು ಪೂರ್ಣ ಅಧ್ಯಯನವನ್ನು ಮಾಡಿದ್ದಾರೆ ಮತ್ತು ಮೂರು ಕಾರಣಗಳನ್ನು ವಿವರಿಸಿದ್ದಾರೆ.

ಅವು ಹೀಗಿವೆ –
1. ಕಂಬ ಅಥವಾ ಟೈರ್ ಮೇಲೆ ಮೂತ್ರ ವಿಸರ್ಜಿಸುವ ಮೂಲಕ ನಾಯಿಗಳು ತಮ್ಮ ಪ್ರದೇಶವನ್ನು ಗುರುತಿಸುತ್ತವೆ. ಇದು ಅವರ ಇತರ ಸಹಚರರನ್ನು ಸಂಪರ್ಕಿಸುವ ಮಾರ್ಗವಾಗಿದೆ. ನಾಯಿಯು ಕಂಬ ಅಥವಾ ಟೈರ್‌ನಲ್ಲಿ ಮೂತ್ರ ವಿಸರ್ಜಿಸಿದಾಗ, ಅವು ಮಾಹಿತಿಯನ್ನು ರವಾನಿಸುತ್ತವೆ. ನಂತರ ಆ ಕಂಬ ಅಥವಾ ಟೈರ್‌ನ ವಾಸನೆ ಗ್ರಹಿಸುವ ಇತರ ನಾಯಿಗಳಿಗೆ ಈ ನಾಯಿ ಇದೇ ಪ್ರದೇಶದಲ್ಲಿದೆ ಎಂಬುದು ಗೊತ್ತಾಗಿ ಬಿಡುತ್ತದೆ. ಹೊಸ ನಾಯಿ ಕೂಡ ಅಲ್ಲೇ ತನ್ನ ಗುರುತು ಬಿಡುತ್ತದೆ.

BIG NEWS: ಬೆಂಗಳೂರು ವಿವಿ ಬಂದ್ ಗೆ ಕರೆ; ನಾಳೆ ತೀವ್ರಗೊಳ್ಳಲಿದೆ ವಿದ್ಯಾರ್ಥಿಗಳ ಪ್ರತಿಭಟನೆ

2. ನಾಯಿಗಳು ಅಡ್ಡ ಮೇಲ್ಮೈಗಿಂತ ಹೆಚ್ಚಾಗಿ ಲಂಬ ಮೇಲ್ಮೈಗಳಿಗೆ ಮೂತ್ರ ವಿಸರ್ಜಿಸಲು ಬಯಸುತ್ತವೆ. ಟೈರ್ ಮತ್ತು ಕಂಬದ ಕೆಳಗಿನ ಭಾಗವು ನಾಯಿಯ ಮೂಗಿನ ವ್ಯಾಪ್ತಿಯೊಳಗೆ ಇರುತ್ತದೆ. ಆದ್ದರಿಂದ, ಅವು ಇತರ ನಾಯಿಗಳ ಮೂಗಿನ ಮಟ್ಟದಲ್ಲಿ ತಮ್ಮ ಗುರುತು ಬಿಡುತ್ತವೆ. ನಾಯಿ ಮೂತ್ರದ ವಾಸನೆಯು ರಬ್ಬರ್ ಟೈರ್‌ನಲ್ಲಿ ದೀರ್ಘಕಾಲ ಉಳಿಯುತ್ತದೆ. ಮತ್ತೊಂದೆಡೆ, ನಾಯಿಗಳು ನೆಲದ ಮೇಲೆ ಮೂತ್ರ ವಿಸರ್ಜಿಸಿದರೆ, ಅವುಗಳ ವಾಸನೆಯು ಅಲ್ಪಾವಧಿಯಲ್ಲಿ ಕೊನೆಗೊಳ್ಳುತ್ತದೆ.

3. ನಾಯಿಗಳು ರಬ್ಬರ್ ಟೈರ್ ಮೇಲೆ ಮೂತ್ರ ವಿಸರ್ಜಿಸಲು ಇನ್ನೊಂದು ಕಾರಣವಿದೆ. ಅವುಗಳಿಗೆ ರಬ್ಬರ್ ವಾಸನೆ ಬಹಳ ಇಷ್ಟ. ಹೀಗಾಗಿ ಟಯರ್ ವಾಸನೆಗೆ ಆಕರ್ಷಿತವಾಗಿ ಅದರ ಬಳಿ ಹೋಗಿ ಮೂತ್ರ ವಿಸರ್ಜಿಸಿ ಹಿಂತಿರುಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...