alex Certify ಮಿಕ್ಸಿಯಲ್ಲಿ ಮಾಡಿದ ಚಟ್ನಿ ಬೇಗ ಹಳಸುವುದೇಕೆ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಕ್ಸಿಯಲ್ಲಿ ಮಾಡಿದ ಚಟ್ನಿ ಬೇಗ ಹಳಸುವುದೇಕೆ…..?

Hotel style coconut chutney | coconut chutney | dosa chutney | easy and tasty coconut chutney | - YouTube

ಈ ಆಧುನಿಕ ಯುಗದಲ್ಲಿ, ವೇಗದ ಜೀವನ ಶೈಲಿಯಲ್ಲಿ, ಜನರ ಬದುಕಿಗೆ ಸ್ನೇಹಿತನ ಹಾಗೆ ಇರೋದು ಯಂತ್ರತಂತ್ರಗಳು. ಆದರೆ ವೇಗವಾಗಿ ಕೆಲಸ ಆಗುವುದೆನೋ ನಿಜ. ಕೆಲವೊಮ್ಮೆ ಅಷ್ಟೇ ವೇಗವಾಗಿ ಅದರ ಸತ್ವವೂ ಕಳೆದು ಹೋಗುತ್ತದೆ. ಹೌದು, ಅಡುಗೆ ಮನೆಯಲ್ಲಿ ಹೊಸ ಹೊಸ ಯಂತ್ರೋಪಕರಣಗಳ ಆವಿಷ್ಕಾರ ಹೆಣ್ಣು ಮಕ್ಕಳ ಕಷ್ಟವನ್ನು ಕಡಿಮೆ ಮಾಡಿದೆ ಆದರೂ, ಅಜ್ಜಿ ಕಾಲದ ರುಚಿ ಎಲ್ಲೋ ಕಳೆದು ಹೋಗಿದೆ ಎಂಬ ಭಾವನೆ ಸದಾ ಇದ್ದೇ ಇದೆ.

ಮಿಕ್ಸಿಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ರುಬ್ಬುವ ಕಲ್ಲಿನಲ್ಲಿ ಚಟ್ನಿ ಮಾಡಿದರೆ ರುಚಿ ಅದ್ಬುತವಾಗಿರುತ್ತಿತ್ತು ಅಷ್ಟೇ ಅಲ್ಲ ಸಂಜೆಯವರೆಗೂ ಕೆಡುತ್ತಿರಲಿಲ್ಲ. ವಿದ್ಯುತ್ನಿಂದ ಮಿಕ್ಸಿಯಲ್ಲಿ ರುಬ್ಬುವಾಗ ಹೆಚ್ಚು ಶಾಖ ಉತ್ಪತ್ತಿಯಾಗಿ ಚಟ್ನಿ ಮಧ್ಯಾನ್ಹದ ವೇಳೆಗೆ ಹಳಸುವುದುಂಟು. ಇದಕ್ಕೊಂದು ಚಿಕ್ಕ ಪರಿಹಾರ ಅಂದರೆ ಚಟ್ನಿ ರುಬ್ಬುವಾಗ ಒಂದು ಚಿಕ್ಕ ನೀರಿನ ಗಡ್ಡೆ ಅಂದರೆ ಐಸ್ ಕ್ಯೂಬ್ ಹಾಕಿ ರುಬ್ಬಿ. ಇದರಿಂದ ಚಟ್ನಿ ಬಹಳ ಬೇಗ ಹಳಸದೆ ಇರುವುದನ್ನು ತಪ್ಪಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...