alex Certify ಚಂದ್ರನ ಮೇಲೆ ಇಳಿಯುವ ಮಹತ್ವಾಕಾಂಕ್ಷಿ ಯೋಜನೆಯನ್ನು 2025ರ ವರೆಗೆ ನಾಸಾ ಮುಂದೂಡಿದ್ದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಂದ್ರನ ಮೇಲೆ ಇಳಿಯುವ ಮಹತ್ವಾಕಾಂಕ್ಷಿ ಯೋಜನೆಯನ್ನು 2025ರ ವರೆಗೆ ನಾಸಾ ಮುಂದೂಡಿದ್ದರ ಹಿಂದಿದೆ ಈ ಕಾರಣ

ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಅಮೆರಿಕ ಸರ್ಕಾರವು 2024ರ ಆರಂಭದಲ್ಲಿ ಚಂದ್ರನ ಮೇಲೆ ತನ್ನ ಗಗನ ಯಾತ್ರಿಕರನ್ನು ಇಳಿಸುವ ಮಹತ್ವಾಕಾಂಕ್ಷಿ ಯೋಜನೆ ಘೋಷಿಸಿತ್ತು. ಅದಕ್ಕೆ ಎಲ್ಲ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಮಾಡಿಕೊಳ್ಳಲು ಬಾಹ್ಯಾಕಾಶ ಅಧ್ಯಯನ ಸಂಸ್ಥೆಯಾದ ’ನಾಸಾ’ಗೆ ಸೂಚಿಸಲಾಗಿತ್ತು.

ಆದರೆ ಸದ್ಯ, ಈ ಯೋಜನೆಯನ್ನು ನಾಸಾ ವಿಜ್ಞಾನಿಗಳು ಒಂದು ವರ್ಷ ಮುಂದೂಡಿದ್ದಾರೆ. ಅಂದರೆ, 2025ರ ಮಧ್ಯಭಾಗ ಅಥವಾ ಅಂತ್ಯಕ್ಕೆ ಗಗನಯಾತ್ರಿಕರು ಚಂದ್ರನ ಮೇಲೆ ಕಾಲಿಡಲಿದ್ದಾರೆ. ಈ ಬಗ್ಗೆ ನಾಸಾದ ಮುಖ್ಯಸ್ಥ ಬಿಲ್‌ ನೆಲ್ಸನ್‌ ಅವರೇ ಘೋಷಣೆ ಹೊರಡಿಸಿದ್ದಾರೆ.

ಚಂದ್ರನ ಮೇಲೆ ಕಾಲಿಡುವ ಯೋಜನೆಗೆ 52 ಸಾವಿರ ಕೋಟಿ ರೂ.ನಿಂದ 75 ಸಾವಿರ ಕೋಟಿ ರೂ.ವರೆಗೆ ವೆಚ್ಚ ಮಾಡಬೇಕಾಗುತ್ತದೆ.

ಅವರ ಪ್ರಕಾರ, ಚಂದ್ರನಲ್ಲಿಗೆ ತೆರಳುವ ಒರಿಯನ್‌ ಕ್ಯಾಪ್ಸೂಲ್‌ ಎಂಬ ಬಾಹ್ಯಾಕಾಶ ವಾಹನ ತಯಾರಿಸಲು ಅಗತ್ಯವಾದ ಹಣವನ್ನು ಅಮೆರಿಕದ ಸಂಸತ್ತು ನೀಡಿಲ್ಲವಂತೆ. ಇದಲ್ಲದೇ ಅಮೆಜಾನ್‌ ಕಂಪನಿಯ ಸಂಸ್ಥಾಪಕ ಮತ್ತು ಜಗತ್ತಿನ ಶ್ರೀಮಂತ ಉದ್ಯಮಿ ಜೆಫ್‌ ಬೆಜೋಸ್‌ ಅವರು, ತಮ್ಮ ಬಾಹ್ಯಾಕಾಶ ಕಂಪನಿಯ ರಾಕೆಟ್‌ ಉಡಾವಣೆ ಸಂಬಂಧ ಹೂಡಿದ್ದ ಕಾನೂನು ಪ್ರಕರಣ ಇತ್ಯರ್ಥವಾಗದೆಯೇ ನಾಸಾದ ಯೋಜನೆಗಳು ತಡವಾಗುತ್ತಿವೆ ಎಂದು ನೆಲ್ಸನ್‌ ಆರೋಪಿಸಿದ್ದಾರೆ. 2022 ರ ಫೆಬ್ರವರಿಯಲ್ಲಿ ಗಗನಯಾತ್ರಿಕರು ಇಲ್ಲದೆಯೇ ಪರೀಕ್ಷಾರ್ಥ ರಾಕೆಟ್‌ ಉಡಾವಣೆಯು ನಾಸಾದಿಂದ ನಡೆಸಲಾಗುತ್ತಿದೆ.

ಅದರ ಯಶಸ್ಸು, ಅನುಭವದ ಆಧಾರದ ಮೇಲೆ 2025ರಲ್ಲಿ ಗಗನಯಾತ್ರಿಕರು ಚಂದ್ರನಿಗೆ ತೆರಳಿ, ಅಲ್ಲಿಯೇ ಉಳಿದುಕೊಂಡು ಮಹತ್ತರ ಅಧ್ಯಯನ ನಡೆಸಲಿದ್ದಾರೆ.

ವಿಶೇಷವೆಂದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯನ್ನು 2025ರಲ್ಲಿ ಚಂದ್ರನಲ್ಲಿಗೆ ಕಳುಹಿಸಿಕೊಡಲಾಗುತ್ತಿದೆ. ನಾಸಾ ಸಂಸ್ಥೆ ಈ ವಿಶೇಷ ಕೆಲಸ ಮಾಡುತ್ತಿದೆ. 1972ರಲ್ಲಿಅಪೋಲೊ ಮಿಷನ್‌ ಮೂಲಕ ನಾಸಾ ಸಂಸ್ಥೆಯು ಗಗನಯಾತ್ರಿಕರನ್ನು ಚಂದ್ರನ ಮೇಲೆ ಇಳಿಸಿತ್ತು. ಒಟ್ಟಾರೆ 12 ಜನರು ಚಂದ್ರನ ನೆಲದ ಅಧ್ಯಯನ ನಡೆಸಿ ವಾಪಾಸಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...