alex Certify ಸಿಎಂ ಆಗಿ ಶಿಂಧೆ ಆಯ್ಕೆ ಹಿಂದಿರುವ ಲೆಕ್ಕಾಚಾರಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಆಗಿ ಶಿಂಧೆ ಆಯ್ಕೆ ಹಿಂದಿರುವ ಲೆಕ್ಕಾಚಾರಗಳು

ಆಶ್ಚರ್ಯಕರ ಬೆಳವಣಿಗೆಯಲ್ಲಿ ಬಿಜೆಪಿ ಶಿವಸೇನೆಯ ಬಂಡಾಯ ನಾಯಕ ಏಕನಾಥ ಶಿಂಧೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪದವಿ ನೀಡಿದೆ. ಹಲವು ಲೆಕ್ಕಾಚಾರಗಳನ್ನು ಇಟ್ಟುಕೊಂಡೇ ಬಿಜೆಪಿ ಈ ನಿರ್ಧಾರಕ್ಕೆ ಬಂದಿದೆ ಎಂದೇ ಹೇಳಲಾಗುತ್ತಿದೆ.

ಪ್ರಮುಖವಾಗಿ ರಾಜ್ಯದಲ್ಲಿ ಬಾಳಾ ಠಾಕ್ರೆ ಕುಟುಂಬದಲ್ಲಿದ್ದ ಶಿವಸೇನೆಯನ್ನು ಇಬ್ಭಾಗ ಮಾಡುವುದು ಮತ್ತು ಆ ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸಿ ಅವರಿಗೆ ಸಮಾಧಾನ ತರುವ ಮೂಲಕ ಉತ್ತಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಭಾವನೆ ಬರುವಂತಾಗಲಿ ಎಂಬುದು ಬಿಜೆಪಿ ಈ ನಿರ್ಧಾರದ ಹಿಂದಿನ ಕಾರಣವಾಗಿದೆ ಎಂದು ಹೇಳಲಾಗಿದೆ.

ತನಗೆ ಹೆಚ್ಚು ಸ್ಥಾನಗಳಿದ್ದರೂ ಬಿಜೆಪಿ ಏಕನಾಥ ಶಿಂಧೆಗೆ ಮಣೆ ಹಾಕಿದ್ದಕ್ಕೆ ಪ್ರಮುಖವಾಗಿ ನಾಲ್ಕು ಕಾರಣಗಳನ್ನು ಇಲ್ಲಿ ವಿಶ್ಲೇಷಿಸಬಹುದಾಗಿದೆ.

• ಬಂಡುಕೋರ ಶಾಸಕರ ಭಿನ್ನಮತದಿಂದಾಗಿ ಮುಖ್ಯಮಂತ್ರಿ ಪದವಿಯಿಂದ ಇಳಿದ ಉದ್ಧವ್ ಠಾಕ್ರೆ ಜನರಲ್ಲಿ ಸಹಾನುಭೂತಿ ಗಳಿಸುತ್ತಿರುವಂತೆ ತೋರಿದಾಗಲೂ ಬಿಜೆಪಿ ತಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂಬುದನ್ನು ತೋರಿಸಲು ಮುಖ್ಯಮಂತ್ರಿ ಪದವಿಗೆ ಬೇಡಿಕೆ ಇಟ್ಟಿಲ್ಲ.

• ಬಿಜೆಪಿ ಹಿಂದುತ್ವದ ಸಿದ್ಧಾಂತಕ್ಕೆ ಸೆಡ್ಡು ಒಡೆಯುವ ಮೂಲಕ ಸವಾಲಾಗಿ ನಿಂತಿರುವ ಶಿವಸೇನೆಯನ್ನು ಮುಗಿಸಲು ಏಕನಾಥ್ ಶಿಂಧೆ ಅವರನ್ನು ಸಾಧನವಾಗಿ ಬಳಸಬಹುದು.

• ಈ ಹಿಂದೆ ದೇವೇಂದ್ರ ಫಡ್ನಾವೀಸ್ ನೇತೃತ್ವದ ಸರ್ಕಾರ ಮರಾಠ ಪ್ರತಿಭಟನೆಗಳನ್ನು ಎದುರಿಸಿತ್ತು. ಇದೀಗ ಅದೇ ಮರಾಠ ನಾಯಕನನ್ನು ಸಿಎಂ ಗಾದಿಗೆ ಏರಿಸುವ ಮೂಲಕ ಮರಾಠದ ಕೋಪವನ್ನು ತಣಿಸಬಹುದು ಎಂಬ ಆಲೋಚನೆ.

• ಈ ಹಿಂದೆ ಬಿಹಾರದಲ್ಲಿ ಅಲ್ಪಮತಕ್ಕೆ ಕುಸಿದಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರಕ್ಕೆ ಬೆಂಬಲ ನೀಡಿ ಉಳಿಸಿದ್ದ ರೀತಿಯಲ್ಲೇ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್ ಸಿ ಪಿ ವಿರುದ್ಧ ಹೋರಾಡಲು ಶಿಂಧೆ ಅವರನ್ನು ಮುಂದೆ ಬಿಡುವುದು. ಈ ಮೂಲಕ 2024 ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...