alex Certify ಬೋರಿಸ್ ರಾಜೀನಾಮೆ​ ಬಳಿಕ ʼಪ್ರಧಾನಿʼ ಹುದ್ದೆ ರೇಸ್​ ನಲ್ಲಿರುವ ರಿಷಿ ಸುನಕ್​ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೋರಿಸ್ ರಾಜೀನಾಮೆ​ ಬಳಿಕ ʼಪ್ರಧಾನಿʼ ಹುದ್ದೆ ರೇಸ್​ ನಲ್ಲಿರುವ ರಿಷಿ ಸುನಕ್​ ಕುರಿತು ಇಲ್ಲಿದೆ ಮಾಹಿತಿ

ಬ್ರಿಟನ್​ ಪ್ರಧಾನಿ ಸ್ಥಾನಕ್ಕೆ ಬೋರಿಸ್​ ಜಾನ್ಸನ್​ ​ ರಾಜೀನಾಮೆ ನೀಡಿದ್ದಾರೆ. ಅವರು ಕನ್ಸರ್ವೇಟಿವ್​ ನಾಯಕತ್ವಕ್ಕೆ ರಾಜೀನಾಮೆಯನ್ನು ಘೋಷಿಸಲಿದ್ದಾರೆ, ಅವರ ಬದಲಿಗೆ ಮತ್ಯಾರಿಗೆ ನಾಯಕತ್ವ, ಯಾರು ಪ್ರಧಾನಿಯಾಗಬಹುದೆಂದು ಪಕ್ಷದೊಳಗೆ ಸ್ಪರ್ಧೆಗೆ ದಾರಿ ಮಾಡಿಕೊಟ್ಟಿದೆ. ಹಲವಾರು ಸಂಭಾವ್ಯ ಉತ್ತರಾಧಿಕಾರಿ ಹೆಸರು ಕೇಳಿಬಂದರೂ ಯಾವುದೂ ಸ್ಪಷ್ಟವಾಗಿಲ್ಲ.

ಪ್ರಧಾನಿಯಾಗುವ ರೇಸ್​ನಲ್ಲಿ ರಿಷಿ ಸುನಕ್​ ಹೆಸರು ಕೇಳಿಬಂದಿದೆ, 42 ವರ್ಷದ ಸುನಕ್​ ಸಾಮಾಜಿಕ ಮಾಧ್ಯಮದಲ್ಲಿ ಉನ್ನತ ಪ್ರೊಫೈಲ್ ಹೊಂದಿದ್ದಾರೆ, ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕತೆಯನ್ನು ಹೆಚ್ಚಿಸಿದ್ದಕ್ಕಾಗಿ ಪ್ರಶಂಸೆಯನ್ನು ಸಹ ಗಳಿಸಿದ್ದಾರೆ. ಅದರೂ ಜೀವನಾವಶ್ಯಕ ವಸ್ತು ಬೆಲೆ ಏರಿಕೆ ಅವರ ಜನಪ್ರಿಯತೆಯನ್ನು ಕೊಂಚ ಮಟ್ಟಿಗೆ ಘಾಸಿಗೊಳಿಸಿದೆ.

ಇನ್ಫೋಸಿಸ್​ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್​ ಅವರು ಮೇ 2015 ರಲ್ಲಿ ರಿಚ್ಮಂಡ್​ (ಯಾರ್ಕ್ಸ್​)ಗೆ ಕನ್ಸರ್ವೇಟಿವ್​ ಸಂಸದರಾಗಿ ಆಯ್ಕೆಯಾದರು, ಇದು ಅವರ ರಾಜಕೀಯ ಪ್ರವೇಶದ ಆರಂಭ.

ರಾಜಕೀಯಕ್ಕೆ ಸೇರುವ ಮೊದಲು ರಿಷಿ ಸುನಕ್​ 2001 -2004ರವರೆಗೆ ಪ್ರಮುಖ ಹೂಡಿಕೆ ಬ್ಯಾಂಕ್​ನಲ್ಲಿ ವಿಶ್ಲೇಷಕರಾಗಿ ಕೆಲಸ ಮಾಡಿದ್ದರು. ಅವರು ಸಿಲಿಕಾನ್​ ವ್ಯಾಲಿಯಿಂದ ಬೆಂಗಳೂರಿನವರೆಗೆ ಕಂಪನಿಗಳೊಂದಿಗೆ ಕೆಲಸ ಮಾಡುವ ದೊಡ್ಡ ಹೂಡಿಕೆ ಸಂಸ್ಥೆಯನ್ನು ಸಹ ಸ್ಥಾಪಿಸಿದ್ದಾರೆ.

ಪೂರ್ವ ಆಫ್ರಿಕಾದಿಂದ ವಲಸೆ ಬಂದ ಭಾರತೀಯ ಪೋಷಕರಿಗೆ ಸೌತಾಂಪ್ಟನ್​ನಲ್ಲಿ ಜನಿರುವ ಸುನಕ್​ ವಿಂಚೆಸ್ಟರ್​ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಅವರು ತರುವಾಯ ಆಕ್ಸ್‌ಫರ್ಡ್‌ನ ಲಿಂಕನ್​ ಕಾಲೇಜಿನಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಓದಿದರು. ಸ್ಟ್ಯಾನ್​ಫೋರ್ಡ್​ನಲ್ಲಿ ಓದುತ್ತಿದ್ದಾಗ, ಅವರು ಅಕ್ಷತಾ ಮೂರ್ತಿಯವರನ್ನು ಭೇಟಿಯಾದರು, ಸ್ನೇಹ ಪ್ರೀತಿಗೆ ತಿರುಗಿ ಬಳಿಕ ವಿವಾಹವಾದರು. ಅಕ್ಷತಾ ಮೂರ್ತಿ ಇನ್ಫೋಸಿಸ್​ ಸ್ಥಾಪಿಸಿದ ಭಾರತೀಯ ಬಿಲಿಯನೇರ್​ ಉದ್ಯಮಿ ಎನ್​.ಆರ್​. ನಾರಾಯಣಮೂರ್ತಿಯವರ ಮಗಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...